Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಂಧ್ರ ಪ್ರದೇಶದ ಸಚಿವರು ರಾಜೀನಾಮೆ!?

ಆಂಧ್ರ ಪ್ರದೇಶದ ಸಚಿವರು ರಾಜೀನಾಮೆ!?
ಆಂಧ್ರ ಪ್ರದೇಶ , ಸೋಮವಾರ, 11 ಏಪ್ರಿಲ್ 2022 (15:03 IST)
ಆಂಧ್ರ ಪ್ರದೇಶ : ಆಂಧ್ರ ಪ್ರದೇಶದ ಎಲ್ಲಾ 24 ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
 
ಸಂಪುಟ ಪುನಾರಚನೆ ಕಾರಣದಿಂದ ಹಾಲಿ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ನೂತನ ಸಚಿವರು ಏಪ್ರಿಲ್ 11 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಚರ್ಚೆಗಳು ಜೋರಾಗುತ್ತಿರುವ ಬೆನ್ನಲ್ಲೇ ಅತ್ತ ಆಂಧ್ರ ಪ್ರದೇಶದಲ್ಲಿ ಸಂಪುಟ ಪುನಾರಚನೆ ಕಸತ್ತು ಶುರುವಾಗಿದೆ. ಹೀಗಾಗಿ ಹಾಲಿ ಸಚಿವರು ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ಸಲ್ಲಿಸಿರುವ ನಾಲ್ವರು ಸಚಿವರು ಮತ್ತೆ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ. ಆದರೆ ಇನ್ನುಳಿದ 19 ಸಚಿವರ ಬದಲು ಹೊಸಬರಿಗೆ ಅವಕಾಶ ನೀಡಲು ಸಿಎಂ ಜಗನ್ ನಿರ್ಧರಿಸಿದ್ದಾರೆ.

ಎಪ್ರಿಲ್ 9ರೊಳಗೆ ಸಿಎಂ ಜಗನ್ ಮೋಹನ್ ರೆಡ್ಡಿ ಹೊಸ ಸಚಿವರು ಪಟ್ಟಿಯನ್ನು ರಾಜ್ಯಪಾಲ ಬಿಸ್ವಬೂಷನ್ ಹರಿಚಂದ್ರನ್ ಅವರಿಗೆ ಸಲ್ಲಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ. ಮುಂಬರವು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಂಪುಟ ಪುನರ್ ರಚನೆ ಮಾಡಲಾಗುತ್ತಿದೆ. ಹೊಸ ಸಂಪುಟದಲ್ಲಿ ಐವರು ಉಪ ಮುಖ್ಯಮಂತ್ರಿಗಳು ಇರಲಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಜಗನ್ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಪ್ರಮುಖವಾಗಿ ಹಿಂದೂ ದೇವಲಾಯಗಳ ವಿಚಾರದಲ್ಲಿ ತೆಗೆದುಕೊಂಡ ಕೆಲ ನಿರ್ಧಾರಗಳು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ಜಗನ್ ಜಾಣ್ಮೆಯಿಂದ ಸಂಪುಟ ಪುನಾರಚನೆ ಮೊರೆ ಹೋಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸಲು ಕಾಂಗ್ರೆಸ್ ಗೆ ನೈತಿಕ ಹಕ್ಕಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ