ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ ಅಮಿತ್ ಶಾ

Webdunia
ಶನಿವಾರ, 28 ಏಪ್ರಿಲ್ 2018 (12:58 IST)
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಪಕ್ಷ ಸಂಘಟನಾ ಸಭೆ, ಸಾರ್ವಜನಿಕ ಸಭೆಗಳನ್ನು ನಡೆಸಿದರು. ಜೊತೆಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಚುನಾವಣಾ ರಣತಂತ್ರ ರೂಪಿಸಿದ್ದಾರೆ. 
 ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಜಿಲ್ಲೆಯಲ್ಲಿ  ಚುನಾವಣೆಯ ಪ್ರಚಾರ ಆರಂಭಿಸಿದೆ. ಇದರ ಭಾಗವಾಗಿ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಕೊಪ್ಪಳ ಜಿಲ್ಲೆಯ ಪ್ರವಾಸ ಹಮ್ಮಿಕೊಂಡಿದ್ದರು. 
 
ಮೊದಲು ಕೊಪ್ಪಳ ನಗರದ ಶಿವಾ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಂಘಟನಾ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಕಾರ್ಯಕರ್ತರಿಗೆ ಪಕ್ಷ ಸಂಘಟನೆ ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿನ ರಣತಂತ್ರಗಳ ಕುರಿತು ಕ್ಲಾಸ್ ತೆಗೆದುಕೊಂಡರು. ಬಳಿಕ ಅಮಿತ್ ಶಾ ಕೊಪ್ಪಳದ ಆರಾಧ್ಯ ದೈವ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಅಮಿತ್ ಷಾ ಭೇಟಿ ನೀಡಿದರು. 
 
ಈ ಸಂದರ್ಭದಲ್ಲಿ ಮಠದ ವಿದ್ಯಾರ್ಥಿಗಳು ಹೂಗಳನ್ನು ನೀಡಿ ಸ್ವಾಗತಿಸಿದರು. ಬಳಿಕ ಗವಿಸಿದ್ದೇಶ್ವರ ಮಠದ ಕತೃ ಗದ್ದುಗೆಯ ದರ್ಶನವನ್ನು ಪಡೆಯಲು ಅಮಿತ್​ ಶಾ ಹೋದರು. ಆದ್ರೆ ಈ ವೇಳೆಯಲ್ಲಿ ಅಮಿತ್​ ಶಾ ಅದೇಷ್ಟೇ ಪ್ರಯತ್ನ ಮಾಡಿದರೂ ಸಹ ಅಮಿತ್​ ಶಾ ಗರ್ಭ ಗುಡಿಯ  ಒಳಗಡೆ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಆದ್ರೆ ಈ ವೇಳೆಯಲ್ಲಿ ಅಮಿತ್​ ಶಾ ಅನಿವಾರ್ಯವಾಗಿ ಹೊರಗಡೆ ನಿಂತುಕೊಂಡು ಗವಿಸಿದ್ದೇಶ್ವರ ದರ್ಶನ ಪಡೆದುಕೊಂಡರು.
 
ಕೊಪ್ಪಳ ಕಾರ್ಯಕ್ರಮ ಬಳಿಕ ಅಮಿತ್​ ಶಾ ನೇರವಾಗಿ ನೂತನ ತಾಲೂಕ ಕುಕನೂರು ಪಟ್ಟಣಕ್ಕೆ ಆಗಮಿಸಿದರು. ಈ ವೇಳೆಯಲ್ಲಿ ಅವರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು. ಈ ವೇಳೆಯಲ್ಲಿ ಅಮಿತ್​ ಶಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಮೇ 15 ರಂದು  ಮಧ್ಯಾಹ್ನ 2 ಗಂಟೆಗೆ ಕಾಂಗ್ರೆಸ್​ ಸೋತು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಳ್ಳತನದ ಬೆನ್ನಲ್ಲೇ ರೈಲಿನಿಂದ ಕೆಳಗೆ ಬಿದ್ದ ಮೊಬೈಲ್ ಕಳ್ಳ: Shocking video

ತಿಂಡಿ ಖರೀದಿಸುತ್ತಿದ್ದವಳು ಕ್ಷಣಾರ್ಧದಲ್ಲಿ ಸಾವು: ಸಣ್ಣ ತಪ್ಪಿನಿಂದ ರೈಲಿನಡಿಗೆ ಸಿಲುಕಿ ಪೀಸ್ ಪೀಸ್ Video

ದೆಹಲಿಯ ಜಂತರ್ ಮಂಥರ್ ನಲ್ಲಿ ಜಿರಳೆ ಪಾರ್ಟಿ ಸದಸ್ಯರ ಮೇಲೆ ಲಾಠಿ ಚಾರ್ಜ್: ದಿಕ್ಕಾಪಾಲಾಗಿ ಓಡಿದ ಸಿಜೆಪಿ ಸದಸ್ಯರು Video

ಶಾಲೆಗೆ ವಿದ್ಯಾರ್ಥಿ ಹನುಮಾನ್ ಚಾಲೀಸಾ ತಂದಿದ್ದಕ್ಕೆ ಬಿಸಾಕಿದ ಶಿಕ್ಷಕಿ: ಮುಂದೇನಾಯ್ತು ನೋಡಿ Video

ಗೃಹಲಕ್ಷ್ಮಿ ಹಣ ಕರೆಕ್ಟ್ ಆಗಿ ಖಾತೆಗೆ ಬರಬೇಕೆಂದರೆ ಈ ಎರಡು ನಿಯಮ ಪಾಲಿಸಬೇಕು

ಮುಂದಿನ ಸುದ್ದಿ
Show comments