ಮಂಗಳೂರು: ನಿನ್ನೆ ದಿನವಿಡೀ ಮಳೆ ಸುರಿದು ಮಂಗಳೂರಿನ ಬೀದಿಗಳನ್ನು ಕಡಲಾಗಿ ಮಾಡಿದ್ದ ವರುಣರಾಯ ಇಂದು ಮತ್ತೆ ಬೆಳಗ್ಗಿನಿಂದಲೇ ಸುರಿಯಲು ಶುರು ಮಾಡಿದ್ದಾನೆ.
ಬೆಳಗ್ಗಿನ ಜಾವ ಬಿಡುವು ತೋರಿದ್ದ ಮಳೆ, ಬೆಳಿಗ್ಗೆ ಮತ್ತೆ ಸುರಿಯಲು ಆರಂಭಿಸಿದೆ. ಇಂದೂ ಕೂಡಾ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಈ ಮೊದಲೇ ಮುನ್ಸೂಚನೆ ನೀಡಿತ್ತು.
ಮುನ್ನಚ್ಚರಿಕೆಯ ಕ್ರಮವಾಗಿ ಇಂದು ದಕ್ಷಿಣ ಕನ್ನಡದಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎನ್ ಡಿಆರ್ ಎಫ್ ಸಿಬ್ಬಂದಿ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳೂ ಪರಿಹಾರ ಕಾರ್ಯದಲ್ಲಿ ತೊಡಗಿವೆ. ಇನ್ನು ಅಕ್ರಮವಾಗಿ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಮಹಾ ಮಳೆಗೆ ಮೃತರಾದವರ ಕುಟುಂಬಕ್ಕೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಲಾ 5 ಲಕ್ಷ ರೂ. ಘೋಷಣೆ ಮಾಡಿದ್ದಾರೆ. ನಿನ್ನೆ ಒಬ್ಬ ಮಹಿಳೆ ಮತ್ತು ಓರ್ವ ಬಾಲಕಿ ಮೃತಪಟ್ಟಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.