ತಿರುವನಂತಪುರಂ : ಶಬರಿಮಲೆ ಯಾತ್ರಾರ್ಥಿಗಳಿಗೆ ಬಂಪರ್ ಆಫರ್ ಸಿಕ್ಕಿದ್ದು, ಚೆನ್ನೈನಿಂದ ಚಿಂಗವನಂಗೆ ರೈಲು ಸೇವೆ ನೀಡಲಾಗುವುದು ಎಂದು ಸೌತ್ ಸ್ಟಾರ್ ರೈಲಿನ ಯೋಜನಾ ಅಧಿಕಾರಿ ಎಸ್.ರವಿಶಂಕರ್ ಮಾಹಿತಿ ನೀಡಿದ್ದಾರೆ.
ಸೌತ್ ಸ್ಟಾರ್ ರೈಲಿನ ಯೋಜನಾ ಅಧಿಕಾರಿ ಎಸ್.ರವಿಶಂಕರ್ ಈ ಕುರಿತು ಮಾತನಾಡಿದ್ದು, ತೀರ್ಥಯಾತ್ರಾ ಕಾಲದಲ್ಲಿ ಶಬರಿಮಲೆ ಯಾತ್ರಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಭಾರತೀಯ ರೈಲ್ವೆಯ ಭಾರತ್ ಗೌರವ್ ರೈಲುಗಳು ಚೆನ್ನೈನಿಂದ ಕೇರಳದ ಕೊಟ್ಟಾಯಂನ ಚಿಂಗವನಂ ರೈಲು ನಿಲ್ದಾಣಕ್ಕೆ ಸೇವೆಗಳನ್ನು ನೀಡಲಾಗುವುದು ಎಂದು ವಿವರಿಸಿದ್ದಾರೆ.
ಭಾರತೀಯ ದಕ್ಷಿಣ ರೈಲ್ವೇ ವಲಯದಿಂದ ಏರ್ಪಡಿಸಲಾಗುವ ರೈಲು ಸೇವೆಗಳು ಆಗಸ್ಟ್ 18, ಸೆಪ್ಟೆಂಬರ್ 17, ಅಕ್ಟೋಬರ್ 20, ನವೆಂಬರ್ 17, ಡಿಸೆಂಬರ್ 1 ಮತ್ತು 15 ರಂದು ಚಾಲ್ತಿಯಲ್ಲಿ ಇರುತ್ತೆ. ಭಾರತ್ ಗೌರವ್ ರೈಲಿನ ದರವು ತತ್ಕಾಲ್ ಟಿಕೆಟ್ಗಿಂತ ಶೇಕಡಾ 20 ರಷ್ಟು ಹೆಚ್ಚಾಗಿರುತ್ತದೆ ಎಂದು ತಿಳಿಸಿದ್ದಾರೆ.