Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ನಲ್ಲಿ ಅಶ್ಲೀಲತೆಗೆ ಕಡಿವಾಣ ಹಾಕಲು ಮುಂದಾಗುತ್ತಾ ಕೇಂದ್ರ ಸರ್ಕಾರ?

Bigg boss
ನವದೆಹಲಿ: ಇತ್ತೀಚೆಗೆ ತೆಲುಗು ಬಿಗ್ ಬಾಸ್ ಸೀಸನ್ 7 ರಲ್ಲಿ ಆಕ್ಷೇಪಾರ್ಹ ದೃಶ್ಯಗಳ ಪ್ರಸಾರ ತಡೆ ಕೋರಿ ಆಂಧ್ರ ಹೈಕೋರ್ಟ್ ಗೆ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು.

ಈ ವೇಳೆ ಇಂತಹ ದೃಶ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಿಂದ ಬಿಗ್ ಬಾಸ್ ಪ್ರಸಾರಕ್ಕೆ ಮುನ್ನ ಸೆನ್ಸಾರ್ ಆಗುವಂತೆ ನೋಡಿಕೊಳ್ಳಬೇಕು ಎಂದು ಆಂಧ್ರ ಹೈಕೋರ್ಟ್ ಕೇಂದ್ರ ಸರ್ಕಾರ, ಮಾ ಟಿವಿ ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಬಿಗ್ ಬಾಸ್ ಒಟಿಟಿ ಸೀಸನ್ ಆರಂಭವಾದ ಮೇಲೆ ಅಶ್ಲೀಲ ಸನ್ನಿವೇಶಗಳು ಎಗ್ಗಿಲ್ಲದೇ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ನಲ್ಲಿ ಲಿಪ್ ಕಿಸ್, ಮಹಿಳಾ ಸ್ಪರ್ಧಿಗಳೊಂದಿಗೆ ಅನುಚಿತ ವರ್ತನೆ ಸಾಮಾನ್ಯವಾಗಿದೆ. ಕನ್ನಡ ಬಿಗ್ ಬಾಸ್ ನಲ್ಲಿ ಇದುವರೆಗೆ ಇದು ನಡೆದಿಲ್ಲವಾದರೂ ಕೆಲವೊಂದು ಅತಿರೇಕದ ವರ್ತನೆ ನೋಡುಗರಿಗೆ ಮುಜುಗರ ತಂದಿದ್ದು ನಿಜ. ಹೀಗಾಗಿ ಕೇಂದ್ರ ಸರ್ಕಾರ ಕೋರ್ಟ್ ಸೂಚನೆಯಂತೆ ಬಿಗ್ ಬಾಸ್ ಗೆ ಸೆನ್ಸಾರ್ ತಂದರೆ ಇಂತಹದ್ದಕ್ಕೆ ಕಡಿವಾಣ ಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶಕ್ಕೆ ತಲುಪಿದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಕ್ಸಸ್ ಯಾತ್ರೆ