ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ಅಂತಿಮ ಘಟ್ಟಕ್ಕೆ ಬಂದಿದ್ದು, ಇಂದು ಮತ್ತು ನಾಳೆ ಫೈನಲ್ ನಡೆಯಲಿದೆ. ಬಿಗ್ ಬಾಸ್ ಸೀಸನ್ 9 ರ ವಿನ್ನರ್ ಯಾರಾಗಬಹುದು?
ಈ ವಾರ ಡಬಲ್ ಎಲಿಮಿನೇಷನ್ ಆಗಿತ್ತು. ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಈ ವಾರ ಮನೆಯಿಂದ ಮೊದಲು ಎಲಿಮಿನೇಟ್ ಆಗಿದ್ದರು. ಅದಾದ ಬಳಿಕ ಆರ್ಯವರ್ಧನ್ ಗುರೂಜಿ ಎಲಿಮಿನೇಟ್ ಆಗಿದ್ದರು.
ಇದೀಗ ಅಂತಿಮವಾಗಿ ದೀಪಿಕಾ, ದಿವ್ಯಾ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ ಫೈನಲ್ ಸ್ಪರ್ಧಿಗಳಾಗಿ ಉಳಿದುಕೊಂಡಿದ್ದಾರೆ. ಈ ಪೈಕಿ ಸೋಷಿಯಲ್ ಮೀಡಿಯಾ ಅಭಿಪ್ರಾಯಗಳ ಪ್ರಕಾರ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ನಡುವೆ ತೀವ್ರ ಪೈಪೋಟಿಯಿದೆ. ಬಿಗ್ ಬಾಸ್ ನಲ್ಲಿ ಮಹಿಳಾ ಸ್ಪರ್ಧಿ ಗೆದ್ದಿದ್ದು ಒಂದೇ ಬಾರಿ. ಈ ಬಾರಿ ದೀಪಿಕಾ ದಾಸ್ ಮತ್ತು ದಿವ್ಯಾ ಉರುಡುಗ ಫೈನಲ್ ನಲ್ಲಿದ್ದು, ಇವರಿಬ್ಬರಲ್ಲಿ ಒಬ್ಬರು ವಿನ್ ಆಗಲಿ ಎಂದು ಮಹಿಳಾ ಫ್ಯಾನ್ಸ್ ಗಳ ಅಭಿಪ್ರಾಯ. ಅಂತಿಮವಾಗಿ ಯಾರು ವಿನ್ ಆಗ್ತಾರೆ ಎಂದು ಶನಿವಾರ ಅಧಿಕೃತವಾಗಿ ಪ್ರಕಟವಾಗಲಿದೆ.