ಬೆಂಗಳೂರು: ಹಿರಿಯ ನಟಿ ಉಮಾಶ್ರೀ ಈಗ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅದೂ ಸೂಪರ್ ಕತೆಯೊಂದಿಗೆ.
ಜೀ ಕನ್ನಡ ವಾಹಿನಿಯಲ್ಲಿ ಪುಟ್ಟಕ್ಕನ ಮಕ್ಕಳು ಎನ್ನುವ ಧಾರವಾಹಿ ಇದೇ ಡಿಸೆಂಬರ್ 13 ರಿಂದ ಸಂಜೆ 6.30 ಕ್ಕೆ ಪ್ರಸಾರ ಆರಂಭವಾಗಲಿದೆ. ಈ ಧಾರವಾಹಿಯಲ್ಲಿ ಮೂವರು ಹೆಣ್ಣು ಮಕ್ಕಳ ತಾಯಿಯಾಗಿ ಉಮಾಶ್ರೀ ಪಾತ್ರ ನಿರ್ವಹಿಸಲಿದ್ದಾರೆ.
ಅಮ್ಮನ ಪಾತ್ರವನ್ನು ಲೀಲಾಜಾಲವಾಗಿ ಮಾಡುವ ಉಮಾಶ್ರೀಯಂತಹ ಹಿರಿಯ ಕಲಾವಿದೆಯ ಅಭಿನಯ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಗಂಡನಿಂದ ದೂರವಾಗಿ ಮಕ್ಕಳನ್ನು ಸಾಕಲು ಕಷ್ಟಪಡುವ ಹೆಣ್ಣು ಮಗಳ ಪಾತ್ರದಲ್ಲಿ ಉಮಾಶ್ರೀ ಮಿಂಚಲಿದ್ದಾರೆ. ಕಿರುತೆರೆ ಉಮಾಶ್ರೀಗೆ ಹೊಸದೇನಲ್ಲ. ಆದರೆ ಈ ಧಾರವಾಹಿಯಲ್ಲಿ ಅವರನ್ನು ಮುಗ್ಧ ಅಮ್ಮನಾಗಿ ವಾಸ್ತವತೆಗೆ ಹತ್ತಿರವಾದ ಅಭಿನಯ ನೋಡುವ ಅವಕಾಶ ಸಿಗಲಿದೆ. ಆರೂರು ಜಗದೀಶ್ ಧಾರವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.