Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

Exclusive:ಅನಿರುದ್ಧ್ ಇನ್ಮೇಲೆ ವಿಲನ್ ಆಗ್ತಾರಾ? ಜೊತೆಯಲಿ ಧಾರವಾಹಿಯಲ್ಲಿ ಕಾದಿದೆ ಸಸ್ಪೆನ್ಸ್!

Exclusive:ಅನಿರುದ್ಧ್ ಇನ್ಮೇಲೆ ವಿಲನ್ ಆಗ್ತಾರಾ? ಜೊತೆಯಲಿ ಧಾರವಾಹಿಯಲ್ಲಿ ಕಾದಿದೆ ಸಸ್ಪೆನ್ಸ್!
ಬೆಂಗಳೂರು , ಸೋಮವಾರ, 6 ಡಿಸೆಂಬರ್ 2021 (11:49 IST)
ಕೃಷ್ಣವೇಣಿ ಕೆ.
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿ ಮನೆ-ಮನೆಯನ್ನೂ ತಲುಪಿದೆ. ಈ ಧಾರವಾಹಿ ನೋಡುವ ಪ್ರೇಕ್ಷಕರಿಗೆ ಕಾಡುವ ಒಂದೇ ಪ್ರಶ್ನೆಯೆಂದರೆ ಇಷ್ಟು ದಿನ ಹೀರೋ ಆಗಿದ್ದ ಆರ್ಯವರ್ಧನ್ ಇನ್ಮುಂದೆ ವಿಲನ್ ಆಗ್ತಾರಾ? ಈ ಪ್ರಶ್ನೆಗೆ ಸ್ವತಃ ಅನಿರುದ್ಧ ಜತ್ಕಾರ್ ಉತ್ತರಿಸಿದ್ದಾರೆ ನೋಡಿ.


  • ವಿಭಿನ್ನ ಲೊಕೇಷನ್ ನಲ್ಲಿ ಶೂಟಿಂಗ್ ನಡೀತಿದೆ ಎಂಬ ಸುದ್ದಿ ಬಂತು. ಇದು ನಿಜವಾ?
ಒಂದು ಹೊಸ ಪ್ರಯತ್ನ ಮಾಡುತ್ತಿದ್ದೇವೆ. ವಿಭಿನ್ನ ಲೊಕೇಷನ್ ನಲ್ಲಿ ಶೂಟಿಂಗ್ ನಡೀತಿದೆ. ಯಾವ ದೃಶ್ಯ, ಯಾವ ಸ್ಥಳ ಎನ್ನುವುದು ಪ್ರೇಕ್ಷಕರಿಗೆ ಸಸ್ಪೆನ್ಸ್ ಆಗಿಯೇ ಇರಲಿ. ಸದ್ಯದಲ್ಲೇ ಅದು ರಿವೀಲ್ ಆಗಲಿದೆ. ಇದೆಲ್ಲದರ ಕ್ರೆಡಿಟ್ ಪರಿಕಲ್ಪನೆ ಮಾಡುವವರಿಗೆ ಹೋಗಬೇಕು.

  • ಇತ್ತೀಚೆಗಿನ ಎಪಿಸೋಡ್ ನೋಡಿದ್ಮೇಲೆ ಜನ ಆರ್ಯವರ್ಧನ್ ನೆಗೆಟಿವ್ ರೋಲ್ ಮಾಡ್ತಾರಾ ಎಂಬ ಪ್ರಶ್ನೆ ಮಾಡುತ್ತಿದ್ದಾರೆ? ಅವರಿಗೆ ಏನು ಸ್ಪಷ್ಟನೆ ಕೊಡುತ್ತೀರಿ?
ಆ ಡೌಟು ಹಾಗೇ ಇರ್ಲಿ. ಆ ಡೌಟು ನನಗೂ ಇದೆ. ಜೊತೆ ಜೊತೆಯಲಿ ಧಾರವಾಹಿ ಎಂದರೇ ತಿರುವುಗಳಿಗೆ ಫೇಮಸ್. ಆರ್ಯವರ್ಧನ್ ಎನ್ನುವ ಪಾತ್ರಕ್ಕೆ ಸಾಕಷ್ಟು ಆಯಾಮಗಳಿವೆ. ಸದ್ಯಕ್ಕೆ ಇದು ನೆಗೆಟಿವ್ ಪಾತ್ರನಾ? ನೆಗೆಟಿವ್ ಆಗುತ್ತಾ ಎನ್ನುವ ಸಂಶಯ ಹಾಗೆಯೇ ಇದೆ. ಅದುವೇ ಕುತೂಹಲ ಇರೋದು. ನೆಗೆಟಿವ್ ಆಗಲ್ಲ ಅಂತಾನೂ ಈಗಲೇ ಏನೂ ಹೇಳಕ್ಕಾಗಲ್ಲ. ಮುಂದೆ ನೋಡೋಣ.

  • ರಾಜನಂದಿನಿ ಸ್ಟೋರಿ ಆದ್ರೆ ಜೊತೆ ಜೊತೆಯಲಿ ಧಾರವಾಹಿ ಮುಗಿಯುತ್ತಾ?
ನಿಜ ಹೇಳಬೇಕಂದ್ರೆ ನನಗೂ ಗೊತ್ತಿಲ್ಲ. ಈ ಪ್ರವಾಸದಲ್ಲಿ ಇಷ್ಟು ತಿರುವು, ಇಷ್ಟೊಂದು ಪರಿಕಲ್ಪನೆಗೆಳು ಬರುತ್ತವೆ ಎಂದು ಅಂದುಕೊಂಡಿರಲಿಲ್ಲ. ಆದರೆ ಇಲ್ಲಿಯವರೆಗೆ ಬಂದಿದೆ. ಈಗ ಗುರಿ ಏನು ಅಂತ ಕೇಳಿದ್ರೆ ಯಾರಿಗೂ ಗೊತ್ತಿಲ್ಲ. ನಾವು ಗುರಿ ತಲುಪುವವರೆಗಿನ ಪ್ರವಾಸವನ್ನು ಎಂಜಾಯ್ ಮಾಡಬೇಕು ಅಷ್ಟೇ.

 
  • ಮದುವೆ ಆದ ಮೇಲೆ ಹ್ಯಾಪೀ ಮೊಮೆಂಟ್ಸ್ ಕಡಿಮೆಯಾಗಿದೆ ಎನ್ನುವ ಕಾಮೆಂಟ್ಸ್ ಇದೆ. ಅದಕ್ಕೆ ಏನಂತೀರಿ?
ಫ್ಯಾನ್ಸ್ ಗೆ ಆ ಕಂಪ್ಲೇಂಟ್ ಇದೆ. ತಿರುವುಗಳು ಇದ್ದರೆನೇ ಮಜಾ. ಮಧ್ಯೆ ಮಧ್ಯೆ ಖುಷಿಯ ಗಳಿಗೆಯೂ ಇದೆ. ಆದ್ರೆ ಒಂದು ಮೃಷ್ಟಾನ್ನ ಭೋಜನ ಎಂದರೆ ಅದರಲ್ಲಿ ಉಪ್ಪಿನಕಾಯಿಯೂ ಇರ್ಲೇಬೇಕು. ಹಾಗೆಯೇ ಇಲ್ಲಿ ಒಳ್ಳೆ ಗಳಿಗೆಗಾಗಿ ಕಾಯಬೇಕು, ಕಾದ ಮೇಲೆ ಸಿಗೋದೇ ಮಜಾ.

  • ಇದೇ ಧಾರವಾಹಿಯಲ್ಲಿ ಸಂಜಯ್ ಪಾಟೀಲ್ ಎನ್ನುವ ಪಾತ್ರ ಮಾಡಿದ್ರಿ. ಆ ಪಾತ್ರ ಮತ್ತೆ ರಿಪೀಟ್ ಆಗುತ್ತಾ?
ಈಗಲೇ ಏನೂ ಹೇಳಕ್ಕಾಗಲ್ಲ. ಆದ್ರೆ ಆ ಪಾತ್ರವನ್ನು ತುಂಬಾ ಜನ ಮೆಚ್ಚಿಕೊಂಡಿದ್ದರು. ನಾನೂ ತುಂಬಾ ಎಂಜಾಯ್ ಮಾಡಿದ ಪಾತ್ರವದು. ಆರ್ಯವರ್ಧನ್ ಎನ್ನುವ ಪಾತ್ರದ ತದ್ವಿರುದ್ಧ ಪಾತ್ರ. ಈ ಧಾರವಾಹಿ ಆರಂಭದಲ್ಲಿ ಎಷ್ಟೋ ಜನ ನನಗೆ ನೆಗೆಟಿವ್ ಪಾತ್ರ ಮಾಡಬೇಡಿ ಎಂದು ಮೆಸೇಜ್ ಮಾಡ್ತಿದ್ದರು. ಈಗ್ಲೂ ಮಾಡ್ತಾರೆ. ಆದ್ರೆ ಆ ಪಾತ್ರ ನೋಡಿದ ಮೇಲೆ ನೆಗೆಟಿವ್ ಆದ್ರೂ ಪರವಾಗಿಲ್ಲ ಎನ್ನುವವರೂ ಇದ್ದಾರೆ. ಮಸಾಲೆ ಇರ್ಬೇಕಲ್ವಾ? ಮೊನ್ನೆ ಒಂದು ಸನ್ನಿವೇಶದಲ್ಲಿ ನನ್ನ ಒಂದು ನಗುವಿನಿಂದ ಜನರ ತಲೆಯಲ್ಲಿ ಸಂಶಯ ಬಂತು. ಅದರಲ್ಲೇ ಇರೋದು ಮಜಾ. ಎಸ್ ಪಿ ಪಾತ್ರ ನೋಡಿದ ಮೇಲೆ ನೆಗೆಟಿವ್ ಶೇಡ್ ಇರುವ ನನ್ನ ಅಭಿನಯವನ್ನೂ ಜನ ಮೆಚ್ಚಿಕೊಂಡಿದ್ದರು. ನಾನೂ ಬಹಳ ಎಂಜಾಯ್ ಮಾಡಿ ಅಭಿನಯ ಮಾಡಿದ ಪಾತ್ರವದು. ಸದ್ಯಕ್ಕೆ ಈ ಪಯಣವನ್ನು ಎಂಜಾಯ್ ಮಾಡ್ತಿದ್ದೀನಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪು ಕನಸಿನ ಗಂಧದ ಗುಡಿ ಟೀಸರ್ ದೃಶ್ಯವೈಭವ: ಮುಂದಿನ ವರ್ಷ ರಿಲೀಸ್