Publish Date: Wed, 06 May 2020 (09:30 IST)
Updated Date: Wed, 06 May 2020 (09:32 IST)
ಬೆಂಗಳೂರು: ಮಂಡ್ಯದಲ್ಲಿ ಕೊರೋನಾ ಸಮಸ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಸೌಕರ್ಯವೊದಗಿಸಿಕೊಡುವಂತೆ ಸಂಸದೆ ಸುಮಲತಾ ಅಂಬರೀಶ್, ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಬಗ್ಗೆ, ಜಿಲ್ಲೆಗೆ ಮರಳುತ್ತಿರುವ ಕಾರ್ಮಿಕರಿಗೆ ಸ್ಕ್ರೀನಿಂಗ್ ವ್ಯವಸ್ಥೆ, ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲು ಶಿಬಿರಗಳ ನಿರ್ಮಾಣ ಮಾಡುವ ಕುರಿತಂತೆ ಮುಖ್ಯಮಂತ್ರಿಗಳ ಜತೆ ಸುಮಲತಾ ಚರ್ಚೆ ನಡೆಸಿದ್ದಾರೆ.
ಅಲ್ಲದೆ, ಮುಂಬೈನಲ್ಲಿ ನೆಲೆಸಿರುವ ಮಂಡ್ಯ ವಾಸಿಗಳು ಅಗತ್ಯ ವಸ್ತುಗಳ ಕೊರತೆ ಅನುಭವಿಸುತ್ತಿದ್ದು, ಕೇಂದ್ರದ ಜತೆ ಮಾತನಾಡಿ ಅವರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ನಮ್ಮ ಮನವಿಗೆ ಮುಖ್ಯಮಂತ್ರಿಗಳಿಂದ ಸೂಕ್ತ ಭರವಸೆ ಸಿಕ್ಕಿದೆ ಎಂದು ಸುಮಲತಾ ಹೇಳಿದ್ದಾರೆ.