ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಪುನೀತ್ ರಾಜ್ ಕುಮಾರ್ ಈಗಾಗಲೇ ಬೇರೆ ಬೇರೆ ಚಾನೆಲ್ ಗಳಿಗೆ ಒಂದು ಧಾರವಾಹಿ ನಿರ್ಮಿಸುತ್ತಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಅವರದೇ ಹಾದಿಯಲ್ಲಿದ್ದಾರೆ.
ಕೆಲವು ವರದಿಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಸದ್ಯದಲ್ಲೇ ಕಲರ್ಸ್ ಕನ್ನಡ ವಾಹಿನಿಗಾಗಿ ಒಂದು ಭಾರೀ ಬಜೆಟ್ ನ ಧಾರವಾಹಿ ನಿರ್ಮಿಸಲಿದ್ದಾರಂತೆ. ಇದೇ ವಾಹಿನಿ ಮೂಲಕ ನಟನಾ ವೃತ್ತಿ ಆರಂಭಿಸಿದ ಯಶ್, ಅದೇ ಚಾನೆಲ್ ಗಾಗಿ ಧಾರವಾಹಿ ನಿರ್ಮಿಸುವ ಸುದ್ದಿ ಬಂದಿದೆ. ವಿವರಗಳು ಬಹಿರಂಗವಾಗಿಲ್ಲ.
ನಟ ಯಶ್ ಕಲರ್ಸ್ ಸೂಪರ್ ವಾಹಿನಿಯ ರಾಯಭಾರಿಯೂ ಹೌದು. ಈಗಾಗಲೇ ಪುನೀತ್ ರಾಜ್ ಕುಮಾರ್ ಕಲರ್ಸ್ ವಾಹಿನಿಗಾಗಿ ಮನೆದೇವ್ರು ಧಾರವಾಹಿ ನಿರ್ಮಿಸುತ್ತಿದ್ದಾರೆ. ಕಿಚ್ಚ ಸುದೀಪ್ ಜೀ ಕನ್ನಡ ವಾಹಿನಿಯ ವಾರಸ್ದಾರ ಧಾರವಾಹಿಯ ನಿರ್ಮಾಪಕರು. ಇದೀಗ ಯಶ್ ಸರದಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ