ನಿರ್ಜಲೀಕರಣ ಸಮಸ್ಯೆಯಿಂದ ಮುಂಬೈನ ಎಚ್.ಎನ್. ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ ಮೂತ್ರಪಿಂಡದ ಕ್ಯಾನ್ಸರ್`ಗೆ ತುತ್ತಾಗಿದ್ದಾರೆ ಎಂಬ ಸುದ್ದಿಗಳು ಆನ್`ಲೈನ್`ನಲ್ಲಿ ಹರಿದಾಡುತ್ತಿವೆ.
ವಿನೋದ್ ಖನ್ನಾ ಸಂಪೂರ್ಣ ಶಕ್ತೀಹೀನರಾಗಿದ್ದು, ಮೇಲೇಳಲು ಇಬ್ಬರ ಸಹಾಯ ಪಡೆಯುತ್ತಿದ್ದಾರೆ. ಆನ್`ಲೈನ್`ನಲ್ಲಿ ಹರಿದಾಡುತ್ತಿರುವ ಈ ಫೋಟೋಗಳು ಅವರ ನಿಜಸ್ಥಿತಿಯ ಕಥೆ ಹೇಳುತ್ತಿವೆ.
ಈ ಕುರಿತು, ಪ್ರತಿಕ್ರಿಯಿಸಿರುವ ಪುತ್ರ ರಾಹುಲ್ ಖನ್ನಾ, ಚಿಕಿತ್ಸೆಗೆ ತಂದೆ ದೇಹ ಸ್ಪಂದಿಸುತ್ತಿದ್ದು, ಆರೋಗ್ಯದಲ್ಲಿ ಬಹುಬೇಗ ಸುಧಾರಣೆ ಕಂಡಿದೆ. ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿಸಿದ್ದಾರೆ.