Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರವಾಹಿ ಈಗ ಇನ್ನಿಲ್ಲದಂತೆ ಟ್ರೋಲ್ ಆಗುತ್ತಿದೆ.
ಚಿತ್ರದುರ್ಗಕ್ಕೆ ಹೋಗುವ ಕಥಾ ನಾಯಕ ರಾಮಚಾರಿ ಮತ್ತು ನಾಯಕಿ ಚಾರು ಪ್ರಪಾತಕ್ಕೆ ಬಿದ್ದ ವಿಚಾರ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಆನಿಮೇಷನ್ ಬಳಸಿ ಮಾಡಿದ ಈ ದೃಶ್ಯವನ್ನು ಜನ ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದರು.
ಇದು ಮತ್ತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಚಿತ್ರದುರ್ಗದಲ್ಲಿ ಇಲ್ಲದ ಕಾಡು ಸೃಷ್ಟಿಸಿ, ಅಲ್ಲಿಂದ ನಾಯಕಿ ಹೆಲಿಕಾಪ್ಟರ್ ನಲ್ಲಿ ಏಣಿ ಬಳಸಿ ಎಸ್ಕೇಪ್ ಆಗುವ ದೃಶ್ಯವನ್ನು ತೋರಿಸಲಾಗಿದೆ. ಇದನ್ನು ನೋಡಿದ ಮೇಲಂತೂ ಜನ ಬಿದ್ದೂ ಬಿದ್ದೂ ನಗುವಂತಾಗಿದೆ.
ರಾಮ್ ಜಿ ನಿರ್ದೇಶನದ ಈ ಧಾರವಾಹಿ ಆರಂಭದಿಂದಲೇ ವೀಕ್ಷಕರನ್ನು ಸೆಳೆಯಲು ಯಶಸ್ವಿಯಾಗಿತ್ತು. ಆದರೆ ಈಗ ಚಿತ್ರದುರ್ಗ ಸೀಕ್ವೆಲ್ ನಲ್ಲಿ ಮಾಡಿದ ಎಡವಟ್ಟಿನಿಂದ ನಗೆಪಾಟಲಿಗೀಡಾಗಿದೆ. ಈ ಮೊದಲು ಇದೇ ರಾಮ್ ಜಿ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ನಾಯಕಿ ಹುಲಿಯಿಂದ ತಪ್ಪಿಸಿಕೊಳ್ಳುವ ದೃಶ‍್ಯ ತೋರಿಸಿ ಇನ್ನಿಲ್ಲದಂತೆ ಟ್ರೋಲ್ ಆಗಿದ್ದರು.