ಇಸ್ಲಾಮಾಬಾದ್: ಕಿರುತೆರೆಯಲ್ಲಿ ಇನ್ಮುಂದೆ ಕಿಸ್ ಮಾಡುವುದು, ತಬ್ಬಿಕೊಳ್ಳುವುದು ಇತ್ಯಾದಿ ದೃಶ್ಯಗಳನ್ನು ತೋರಿಸುವ ಹಾಗಿಲ್ಲ! ಹೀಗೊಂದು ವಿವಾದಾತ್ಮಕ ಸೆನ್ಸಾರ್ ಜಾರಿಗೊಳಿಸಿರುವುದು ನೆರೆಯ ಪಾಕಿಸ್ತಾನದಲ್ಲಿ!
ಟಿವಿ ಮತ್ತು ಚಿತ್ರಮಂದಿರಗಳಲ್ಲಿ ಇನ್ಮುಂದೆ ಇಂತಹ ದೃಶ್ಯಗಳಿರುವ ಸಿನಿಮಾ, ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ. ಸೆನ್ಸಾರ್ ಮಂಡಳಿ ವೀಕ್ಷಿಸಿ ಪ್ರಮಾಣ ಪತ್ರ ನೀಡಿದರೆ ಮಾತ್ರ ಅಂತಹ ಕಾರ್ಯಕ್ರಮಗಳನ್ನು ಬಿತ್ತರಿಸಬಹುದಾಗಿದೆ ಎಂದು ಪಾಕ್ ದೃಶ್ಯ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಆದೇಶ ಹೊರಡಿಸಿದೆ.
ಇನ್ನು, ಈ ಆದೇಶದ ಬಗ್ಗೆ ಅಲ್ಲಿ ಈಗ ಭಾರೀ ಪರ-ವಿರೋಧ ಚರ್ಚೆ ಶುರುವಾಗಿದೆ. ಟಿವಿ ಕಾರ್ಯಕ್ರಮಗಳಲ್ಲಿ ಬೆಡ್ ರೂಂ ದೃಶ್ಯಗಳು, ಚುಂಬನದ ದೃಶ್ಯಗಳು, ತಬ್ಬಿಕೊಳ್ಳುವ ದೃಶ್ಯಗಳು, ಬೋಲ್ಡ್ ಬಟ್ಟೆ ಧರಿಸಿ ಕಾಣಿಸಿಕೊಳ್ಳುವುದಕ್ಕೆ ಕತ್ತರಿ ಹಾಕಬೇಕೆಂದು ಆದೇಶ ಹೊರಡಿಸಲಾಗಿದೆ.