ಬೆಂಗಳೂರು: ಲಾಕ್ ಡೌನ್ ವೇಳೆ ದೂರದರ್ಶನ ವಾಹಿನಿ ತನ್ನ ಹಳೆಯ ರಾಮಾಯಣ, ಮಹಾಭಾರತ ಧಾರವಾಹಿಗಳನ್ನು ಪ್ರಸಾರ ಮಾಡಿ ಮತ್ತೆ ಜನಪ್ರಿಯತೆಯ ಉತ್ತುಂಗಕ್ಕೇರಿತ್ತು. ಅದೇ ಸಕ್ಸಸ್ ಫಾರ್ಮುಲಾವನ್ನು ಈಗ ಕನ್ನಡ ಕಿರುತೆರೆ ವಾಹಿನಿಗಳೂ ಜಾರಿಗೊಳಿಸುತ್ತಿವೆ.
ಸ್ಟಾರ್ ಸುವರ್ಣ ವಾಹಿನಿ ಈಗಾಗಲೇ ಮಹಾಭಾರತ ಹಿಂದಿ ಧಾರವಾಹಿ ಡಬ್ಬಿಂಗ್ ಅವತರಣಿಕೆ ಪ್ರಸಾರ ಮಾಡಿ ಯಶಸ್ಸು ಕಂಡಿದೆ. ಇದಾದ ಬಳಿಕ ಉದಯ ವಾಹಿನಿ, ಜೀ ಕನ್ನಡ ವಾಹಿನಿ ಕೂಡಾ ಮಹಾಭಾರತ ಡಬ್ಬಿಂಗ್ ಧಾರವಾಹಿಗಳನ್ನು ತನ್ನ ವಾಹಿನಿಯಲ್ಲಿ ಪ್ರಸಾರ ಮಾಡಲು ಹೊರಟಿದೆ.
ಜೀ ಕನ್ನಡ ವಾಹಿನಿ ಈಗ ಹಿಂದಿಯ ಪರಮಾವತಾರ್ ಧಾರವಾಹಿಯನ್ನು ‘ಶ್ರೀಕೃಷ್ಣ’ ಎಂಬ ಹೆಸರಿನಲ್ಲಿ ಪ್ರಸಾರ ಮಾಡಲು ಹೊರಟಿದೆ. ಉದಯ ವಾಹಿನಿ ಕೂಡಾ ತನ್ನ ಹಳೆಯ ಮಹಾಭಾರತ ಧಾರವಾಹಿಯನ್ನು ಮರಳಿ ಪ್ರಸಾರ ಮಾಡಲು ಹೊರಟಿದೆ. ಸದ್ಯದಲ್ಲೇ ರಮಾನಂದ ಸಾಗರ್ ಅವರ ರಾಮಾಯಣ ಹಿಂದಿ ಧಾರವಾಹಿ ಕನ್ನಡದಲ್ಲಿ ಪ್ರಸಾರವಾಗಲಿದೆ. ಅಂತೂ ಸಾಲು ಸಾಲು ಪೌರಾಣಿಕ ಧಾರವಾಹಿಗಳ ಟ್ರೆಂಡ್ ಈಗ ಕಿರುತೆರೆಯಲ್ಲಿ ಜೋರಾಗಿದೆ.