ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟಿ ಕಾವ್ಯಾ ಗೌಡ ತಾಯಿಯಾಗುತ್ತಿರುವ ಸಂತೋಷ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಕಾವ್ಯಾ ಉದ್ಯಮಿ ಸೋಮಶೇಖರ್ ಜೊತೆ 2021 ರಲ್ಲಿ ಮದುವೆಯಾಗಿದ್ದರು. ಇಬ್ಬರದ್ದೂ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಇಂದು ಕಾವ್ಯಾ-ಸೋಮಶೇಖರ್ ದಂಪತಿ ಮದುವೆ ವಾರ್ಷಿಕೋತ್ಸವ ಸಂಭ್ರಮ.
ಈ ಸಂಭ್ರಮದ ನಡುವೆಯೇ ಕಾವ್ಯಾ ಈ ಸಂತೋಷದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 2024 ರಲ್ಲಿ ಮಗುವಿನ ಆಗಮನವಾಗಲಿದೆ ಎಂದು ಕಾವ್ಯಾ ಹೇಳಿದ್ದಾರೆ. ಜೊತೆಗೆ ಬೇಬಿ ಬಂಪ್ ಫೋಟೋ ಶೂಟ್ ನ ಕ್ಷಣಗಳನ್ನೂ ಹಂಚಿಕೊಂಡಿದ್ದಾರೆ.
ಕಿರುತೆರೆಯಲ್ಲಿ ಗಾಂಧಾರಿ, ಶುಭ ವಿವಾಹ, ರಾಧಾ ರಮಣ ಸೇರಿದಂತೆ ಕೆಲವು ಧಾರವಾಹಿಗಳಲ್ಲಿ ನಟಿಸಿದ್ದ ಕಾವ್ಯಾ ತಮ್ಮದೇ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಇದೀಗ ದಂಪತಿಯ ಶುಭ ಸುದ್ದಿಗೆ ಫ್ಯಾನ್ಸ್, ಕಿರುತೆರೆ ಸ್ನೇಹಿತರು ಶುಭಾಶಯ ಕೋರುತ್ತಿದ್ದಾರೆ.