ಬೆಂಗಳೂರು: ಕೊರೋನಾ ಬಳಿಕ ಟಿವಿ ವಾಹಿನಿಗಳಲ್ಲಿ ಧಾರವಾಹಿಗಳೇನೋ ಆರಂಭವಾಗಿದೆ. ಆದರೆ ರಿಯಾಲಿಟಿ ಶೋಗಳಿಗೆ ಇನ್ನೂ ಶೂಟಿಂಗ್ ಭಾಗ್ಯ ಸಿಕ್ಕಿಲ್ಲ.
ಹೀಗಾಗಿ ವಾರಂತ್ಯದಲ್ಲಿ ರಿಯಾಲಿಟಿ ಶೋಗಳಿಲ್ಲದೇ ಟಿಆರ್ ಪಿ ಉಳಿಸಿಕೊಳ್ಳಲು ಕನ್ನಡ ವಾಹಿನಿಗಳು ಹೆಣಗಾಡುತ್ತಿವೆ. ಇದಕ್ಕಾಗಿ ತಮ್ಮ ಮೆಚ್ಚಿನ ಧಾರವಾಹಿಗಳನ್ನೇ ಅವಲಂಬಿಸಿದೆ.
ಜೀ ಕನ್ನಡ ವಾಹಿನಿ ಈಗಾಗಲೇ ಶನಿವಾರವೂ ಧಾರವಾಹಿ ಪ್ರಸಾರ ಮಾಡಲು ಶುರು ಮಾಡಿದೆ. ಕಲರ್ಸ್ ಕನ್ನಡ ಕೂಡಾ ಇನ್ನು ಮುಂದೆ ವಾರದ ಆರೂ ದಿನಗಳಲ್ಲಿ ಎಲ್ಲಾ ಧಾರವಾಹಿಗಳನ್ನು ಪ್ರಸಾರ ಮಾಡಲು ನಿರ್ಧರಿಸಿವೆ. ಆ ಮೂಲಕ ರಿಯಾಲಿಟಿ ಶೋಗಳಿಂದ ಕಳೆದುಕೊಂಡ ಟಿಆರ್ ಪಿ ಮರಳಿ ಪಡೆಯಲು ಟಿವಿ ವಾಹಿನಿಗಳು ಈಗ ಧಾರವಾಹಿಗಳನ್ನು ಅವಲಂಬಿಸಿವೆ. ರಿಯಾಲಿಟಿ ಶೋ ವಾಪಸಾದ ಬಳಿಕ ಮತ್ತೆ ಸಮಯ ಹೊಂದಾಣಿಕೆ ಮಾಡಲು ಈ ವಾಹಿನಿಗಳು ಈಗ ಕಷ್ಟಪಡಬೇಕಾಗುತ್ತದೆ. ಅಥವಾ ಮುಂದಿನ ಕೆಲವು ಸಮಯದವರೆಗೆ ರಿಯಾಲಿಟಿ ಶೋಗಳಿಗೆ ಅಷ್ಟೊಂದು ಪ್ರಾತಿನಿಧ್ಯ ಇಲ್ಲದೇ ಹೋಗಬಹುದು.