ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಎರಡು ಟಾಪ್ ಟಿಆರ್ ಪಿ ಇರುವ ಧಾರವಾಹಿಗಳು ಕಳೆದ ಒಂದು ವಾರದಿಂದ ಜೊತೆಯಾಗಿ ಪ್ರಸಾರವಾಗುತ್ತಿದೆ. ಅಂದರೆ ಎರಡೂ ಧಾರವಾಹಿಗಳ ಮಹಾಸಂಗಮ ಎಪಿಸೋಡ್ ಗಳು ನಡೆಯುತ್ತಿವೆ. ಆದರೆ ಜನಪ್ರಿಯತೆ ಹೆಚ್ಚಿಸಲು ಮಾಡಿದ ಈ ತಂತ್ರ ಈಗ ವೀಕ್ಷಕರಿಗೆ ಬೋರ್ ಹೊಡೆಸುತ್ತಿದೆಯೇ?
ಇತ್ತೀಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಕಾಮೆಂಟ್ ಗಳನ್ನು ಗಮನಿಸಿದರೆ ಇದು ನಿಜವೆನಿಸುತ್ತಿದೆ. ಎರಡೂ ಧಾರವಾಹಿಗಳಿಗೆ ಪ್ರತ್ಯೇಕ ಅಭಿಮಾನಿಗಳಿದ್ದಾರೆ. ಸದಾ ಒಬ್ಬರನ್ನೊಬ್ಬರು ಪೈಪೋಟಿಯಿಂದಲೇ ನೋಡುವ ವೀಕ್ಷಕರಿದ್ದಾರೆ.
ಆದರೆ ಈಗ ಅನಿವಾರ್ಯವಾಗಿ ಎರಡು ವಾರಗಳಿಂದ ಎರಡೂ ಧಾರವಾಹಿಗಳು ಜೊತೆಯಾಗಿ ಪ್ರಸಾರವಾಗುತ್ತಿರುವುದರಿಂದ ಕತೆಯಲ್ಲಿ ಯಾವುದೇ ಪ್ರೋಗ್ರೆಸ್ ಕಾಣ್ತಾ ಇಲ್ಲ. ಮಹಾಸಂಗಮ ಐಡಿಯಾ ಏನೋ ಚೆನ್ನಾಗಿದೆ. ಆದರೆ ಇಷ್ಟು ದಿನ ಜಾಸ್ತಿಯಾಯಿತು ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.