Publish Date: Fri, 24 Nov 2017 (08:29 IST)
Updated Date: Fri, 24 Nov 2017 (08:31 IST)
ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತವರ್ಷಿಣಿ ಅದೆಷ್ಟು ಹೆಣ್ಣುಮಕ್ಕಳ ಮನಸ್ಸು ಸೆರೆಹಿಡಿದಿತ್ತೋ.. ಬರೋಬ್ಬರಿ ಆರು ವರ್ಷ ಪ್ರಸಾರವಾದ ಧಾರವಾಹಿ ಕೊನೆಗೂ ಕೊನೆಗೊಳ್ಳುತ್ತಿದೆ!
ಅಮೃತ ಎನ್ನುವ ಅನಕ್ಷರಸ್ಥ ಹೆಣ್ಣು ಮಗಳು ಶ್ರೀಮಂತ ಶಕುಂತಲಾದೇವಿ ಮನೆಯ ಸೊಸೆಯಾಗಿ ದೊಡ್ಡ ಮನೆಗೆ ಕಾಲಿಟ್ಟು ಅಲ್ಲಿ ಅನುಭವಿಸುವ ಸಮಸ್ಯೆಗಳ ಕತೆ ಈ ಧಾರವಾಹಿಯದ್ದು. 6 ವರ್ಷಗಳಿಂದ ನಿರಂತರವಾಗಿ ಪ್ರಸಾರವಾದ ಧಾರವಾಹಿ ಇಂದು ಕೊನೆಗಾಣಲಿದೆ.
ಇಂದು ಧಾರವಾಹಿಯ 1700 ನೇ ಕಂತು ಪ್ರಸಾರವಾಗಲಿದೆ. ಅದೆಷ್ಟೋ ಹೆಣ್ಣು ಮಕ್ಕಳ ಮೆಚ್ಚಿನ ಧಾರವಾಹಿ ಕೊನೆಗೊಳ್ಳುತ್ತಿರುವುದು ಇನ್ನೆಷ್ಟು ಜನರಿಗೆ ಬೇಸರ ತರಿಸಿದೆಯೋ. ಅಂತೂ ರವಿ ಗರಣಿ ಸಾರಥ್ಯದ ಮೆಗಾ ಧಾರವಾಹಿಯೊಂದು ಇಂದಿಗೆ ಕೊನೆಯಾಗುತ್ತಿರುವುದಂತೂ ನಿಜ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ