ನವದೆಹಲಿ: ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕಂಚು ಗೆದ್ದು 36 ವರ್ಷಗಳ ನಂತರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ.
ಬ್ಯಾಡ್ಮಿಂಟನ್ ವಿಭಾಗದಲ್ಲಿ ಇತಿಹಾಸ ಬರೆದ ಸೈನಾ ನೆಹ್ವಾಲ್ ಗೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಸೈನಾ ಸೆಮಿಫೈನಲ್ ಪಂದ್ಯದಲ್ಲಿ ತಾಯ್ ಝು ಇಂಗ್ ವಿರುದ್ಧ ಸೋತ ಸೈನಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಆದರೆ ಭಾರತದ ಇನ್ನೋರ್ವ ತಾರೆ ಪಿವಿ ಸಿಂಧು ಫೈನಲ್ ಗೇರಿದ್ದು, ಚಿನ್ನದ ಪದಕದ ಹಾದಿಯಲ್ಲಿದ್ದಾರೆ. ಒಂದು ವೇಳೆ ಸಿಂಧು ಸೋತರೂ ಬೆಳ್ಳಿ ಪದಕ ಖಚಿತವಾಗಿ ಭಾರತಕ್ಕೆ ಒಲಿಯಲಿದೆ. ಹೀಗಾಗಿ ಭಾರತದ ಎರಡೂ ಬ್ಯಾಡ್ಮಿಂಟನ್ ಕಲಿಗಳು ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ದೇಶಕ್ಕೆ ಹೆಮ್ಮೆ ತಂದಿತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.