ಒಲಿಂಪಿಕ್ ಪದಕ ವಿಜೇತರಿಗೆ ತಕ್ಷಣದ ಮನ್ನಣೆ ಸಿಗುವಂತಾಗಲು ಮುಂದಿನ ರಿಯೋ ಒಲಿಂಪಿಕ್ಸ್ನಲ್ಲಿ ಪದಕ ವಿಜೇತರನ್ನು ಈ ವರ್ಷದ ಖೇಲ್ ರತ್ನಾ ಮತ್ತು ಅರ್ಜುನ ಪ್ರಶಸ್ತಿಗಳಿಗೆ ಪರಿಗಣಿಸುವುದಾಗಿ ಕ್ರೀಡಾ ಸಚಿವಾಲಯ ತಿಳಿಸಿದೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ವಿಜೇತ ಸಾಧನೆಗಳನ್ನು ಮಾಡಿದ ಮೇಲೆ ಒಂದು ಪೂರ್ಣ ವರ್ಷವನ್ನು ಅಥ್ಲೀಟ್ಗಳು ಕಾಯುವುದರಿಂದ ತಪ್ಪಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.
ವೈಯಕ್ತಿಕ ಸ್ಪರ್ಧೆಗಳಲ್ಲಿ ಪದಕ ವಿಜೇತರಾಗಿದ್ದರೂ ಖೇಲ್ ರತ್ನಾ ಪ್ರಶಸ್ತಿ ಸಿಗದಿದ್ದವರಿಗೆ ಈ ಕ್ರೀಡಾ ಗೌರವಕ್ಕೆ ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ಟೀಂ ಈವೆಂಟ್ಗಳಲ್ಲಿ ತಂಡವು ಗೆದ್ದ ಪದಕದಲ್ಲಿ ಉತ್ಕೃಷ್ಟ ಸಾಧ್ನೆ ಮಾಡಿದ ಆಟಗಾರನಿಗೆ ಕೂಡ ಅರ್ಜುನ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.