ರಷ್ಯ ಹೈಜಂಪ್ ಒಲಿಂಪಿಕ್ ಚಾಂಪಿಯನ್ ಅನ್ನಾ ಚಿಚೆರೋವಾ 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಪಾಸಿಟೀವ್ ಫಲಿತಾಂಶ ಬಂದಿರುವುದು ತಮಗೆ ತೀವ್ರ ಆಘಾತ ಉಂಟುಮಾಡಿದ್ದು, ಅದರಿಂದ ಆರೋಪಮುಕ್ತರಾಗುವುದಾಗಿ ಶಪಥ ತೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ರಿಯೊ ಒಲಿಂಪಿಕ್ಸ್‌ನಲ್ಲಿ ತಾವು ಭಾಗಿಯಾಗುವ ಕುರಿತು ಅನುಮಾನ ವ್ಯಕ್ತಪಡಿಸಿದರು.
ರಷ್ಯಾ ಒಲಿಂಪಿಕ್ ಸಮಿತಿ ಮಂಗಳವಾರ ಚಿಚೆರೋವಾ ಮತ್ತು ಇನ್ನೂ 9 ಬೀಜಿಂಗ್ ಒಲಿಂಪಿಕ್ ಪದಕ ವಿಜೇತರು ಸೇರಿದಂತೆ 14 ಮಂದಿ ಅಥ್ಲೀಟ್‌ಗಳ ಮಾದರಿಗಳ ಹೊಸ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ.'' ಇದು ತಮಗೆ ಸಂಪೂರ್ಣ ಆಘಾತಕಾರಿಯಾಗಿದೆ. ಇದು ಹೇಗಾಯಿತೆಂದು ತಮಗೆ ಗೊತ್ತಿಲ್ಲ'' ಎಂದು ಹೇಳಿದ ಚಿಚೆರೋವಾ ರಷ್ಯಾ ತಂಡಕ್ಕೆ ಪ್ರವೇಶ ಕಲ್ಪಿಸಿದರೆ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಆಶಯ ಹೊಂದಿದ್ದಾರೆ.
ಚಿಚೆರೋವಾ ಹಾಲಿ ಒಲಿಂಪಿಕ್ ಹೈಜಂಪ್ ಚಾಂಪಿಯನ್ ಆಗಿದ್ದು, 2012ಲ್ಲಿ ಲಂಡನ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು. ಬೀಜಿಂಗ್‌ನಲ್ಲಿ ಕಂಚಿನ ಪದಕವನ್ನುಅವರು ಗೆದ್ದಿದ್ದರು.