Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಿಯೊ 4ನೇ ದಿನ: ದತ್ತು ಬೊಕಾನಲ್, ಹೀನಾ ಸಿದು, ಪುರುಷರ ಹಾಕಿ ಸ್ಪರ್ಧೆ

ರಿಯೊ 4ನೇ ದಿನ:  ದತ್ತು ಬೊಕಾನಲ್, ಹೀನಾ ಸಿದು, ಪುರುಷರ ಹಾಕಿ ಸ್ಪರ್ಧೆ
ರಿಯೊ ಡಿ ಜನೈರೊ , ಮಂಗಳವಾರ, 9 ಆಗಸ್ಟ್ 2016 (15:57 IST)
3 ದಿನಗಳ ಮೆಗಾ ಈವೆಂಟ್ ಬಳಿಕ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಇನ್ನೂ ಪದಕ ಗೆಲ್ಲಬೇಕಾಗಿದ್ದು, ನಾಲ್ಕನೇ ದಿನ ದತ್ತು ಬೊಕಾನಲ್, ಹೀನಾ ಸಿದು ಮತ್ತು ಪುರುಷರ ಹಾಕಿ ತಂಡವು ಆಡಲಿದ್ದು, ಭಾರತ ಖಾತೆ ತೆಗೆಯುತ್ತದೆಯೇ ಎಂದು ಕಾದು ನೋಡಬೇಕು.
 
ರೋವಿಂಗ್: ಭಾರತದ ದತ್ತು ಬಾಬನ್ ಬೊಕಾನಲ್ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಆ. 6ರಂದು ನಡೆದ ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಗಳಿಸಿದ್ದರು.
 
ಶೂಟಿಂಗ್: ಹೀನಾ ಸಿದು ಭಾರತ ತಂಡದಲ್ಲಿ ಉಳಿದಿರುವ ಏಕಮಾತ್ರ ಶೂಟರ್ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ತಿದ್ದಿಕೊಳ್ಳಲು ಯತ್ನಿಸಿದ್ದಾರೆ.
ಕಾಲ: ಸಂಜೆ 5.30ರ ನಂತರ
ಹಾಕಿ: ಭಾರತದ ಪುರುಷರ ಹಾಕಿ ತಂಡವು ಮೂರನೇ ಪಂದ್ಯವನ್ನು ಅರ್ಜಂಟೈನಾ ವಿರುದ್ಧ ಆಡಲಿದೆ. ರಾತ್ರಿ 7.30ರ ನಂತರ.
ಬಿಲ್ಲುಗಾರಿಕೆ: ಪುರುಷರ ವೈಯಕ್ತಿಕ ಎಲಿಮಿನೇಷನ್ ಸುತ್ತಿನಲ್ಲಿ ಅತನು ದಾಸ್ ಭಾಗವಹಿಸಲಿದ್ದಾರೆ. 
ಸಮಯ: 8 ಗಂಟೆಯ ನಂತರ
 
 ಬಾಕ್ಸಿಂಗ್ : ಭಾರತದ ವಿಕಾಸ್ ಕೃಷ್ಣನ್ 75 ಕೆಜಿ ಮಿಡಲ್‌ವೇಟ್ ವಿಭಾಗದಲ್ಲಿ ಅಮೆರಿಕದ ಬಾಕ್ಸರ್ ಚಾರ್ಲ್ಸ್ ಕಾನ್ವೆಲ್ ವಿರುದ್ಧ ಆಡಲಿದ್ದಾರೆ. ಸಮಯ: 2.45 ಮುಂಜಾನೆ(ಆಗಸ್ಟ್ 10).

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಾಲ್ಟ್ ಫೈನಲ್ಸ್‌ಗೆ ಮುನ್ನ ದೀಪಾಳನ್ನು ''ಗೃಹಬಂಧನ'' ದಲ್ಲಿರಿಸಿದ ಕೋಚ್