ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಆಗಸ್ಟ್ 14ರಂದು ಒಲಿಂಪಿಕ್ಸ್ ವಾಲ್ಟ್ ಫೈನಲ್ಸ್‌ನಲ್ಲಿ ಪದಕ ಗೆಲ್ಲುತ್ತಾರೆಂದು ಅನೇಕ ಮಂದಿ ನಿರೀಕ್ಷಿಸಿರುವ ನಡುವೆ ದೀಪಾ ಕೋಚ್ ಬಿಶ್ವೇಶ್ವರ್ ನಂದಿ ದೀಪಾಳನ್ನು ಒಲಿಂಪಿಕ್ಸ್ ಗ್ರಾಮದಲ್ಲಿ ಅಕ್ಷರಶಃ ''ಗೃಹಬಂಧನ''ದಲ್ಲಿ ಇರಿಸಿದ್ದಾರೆ. ದೀಪಾ ತವರುಪಟ್ಟಣ ತ್ರಿಪುರಾದ ಅಗರ್ತಲಾದಿಂದ ಬ್ರೆಜಿಲ್ 35,000 ಕಿಮೀ ದೂರದಲ್ಲಿದ್ದು, ನಾಳೆ 23ನೇ ವರ್ಷಕ್ಕೆ ದೀಪಾ ಕಾಲಿಡಲಿದ್ದಾರೆ.
ಅವರ ತಂದೆ, ತಾಯಿಗಳನ್ನು ಬಿಟ್ಟರೆ ಬೇರಾರಿಂದಲೂ ಹುಟ್ಟುಹಬ್ಬದ ಶುಭಾಶಯಗಳನ್ನು ದೀಪಾ ಸ್ವೀಕರಿಸುವ ಸಾಧ್ಯತೆಯಿಲ್ಲ. ದೀಪಾಳ ಏಕಮಾತ್ರ ಸಂಗಾತಿ ರೂಂಮೇಟ್ ಏಕೈಕ ಮಹಿಳಾ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ದೀಪಾ ಜತೆಗಿದ್ದಾರೆ ಮತ್ತು ನಂದಿ ದೀಪಾಗೆ ಕಳೆದ 16 ವರ್ಷಗಳಿಂದ ಕೋಚ್ ಆಗಿದ್ದಾರೆ.
ನಾನು ದೀಪಾ ಮೊಬೈಲ್‌ನಿಂದ ಸಿಂಕಾರ್ಡ್ ತೆಗೆದಿದ್ದೇನೆ. ಬರೀ ತಂದೆ, ತಾಯಿಗಳಿಗೆ ಮಾತ್ರ ಅವಳ ಜತೆ ಮಾತನಾಡಲು ಅವಕಾಶವಿದೆ. ಏಕೆಂದರೆ ದೀಪಾಳ ಗಮನ ಬೇರೆಕಡೆಗೆ ಹರಿಯುವುದು ತಮಗೆ ಇಷ್ಟವಿಲ್ಲ ಎಂದು ನಂದಿ ಹೇಳಿದ್ದಾರೆ.
ದೀಪಾ ಅಪಾಯಕಾರಿ ಪ್ರುಡುನೋವಾ ವಾಲ್ಟ್ ಪ್ರದರ್ಶನದಿಂದ ಗಮನಸೆಳೆದಿದ್ದು, ಮಹಿಳಾ ವಾಲ್ಟ್‌ನಲ್ಲಿ ಕಠಿಣ ಮಟ್ಟದ್ದಾಗಿದೆ.
ಜಿಮ್ನಾಸ್ಟಿಕ್‌ನಲ್ಲಿ ಪ್ರತಿಯೊಂದು ಈವೆಂಟ್ ಅಪಾಯಕಾರಿಯಾಗಿದ್ದು, ಅಪಘಾತ ಯಾವುದೇ ಸಂದರ್ಭದಲ್ಲಿ ಸಂಭವಿಸಬಹುದು. ಆದರೆ ದೀಪಾ ಪ್ರುಡುನೋವಾ ಕಲೆಯನ್ನು ಕರಗತ ಮಾಡಿಕೊಂಡಿದ್ದು ಅವಳು ಗೆಲ್ಲುತ್ತಾಳೆಂದು ಭರವಸೆಯನ್ನು ನಂದಿ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ