ನವದೆಹಲಿ: ವಿಶ್ವ ಅಥ್ಲಿಟ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜ್ವಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾಗೆ ಪ್ರಧಾನಿ ಮೋದಿ, ಭಾರತೀಯ ಸೇನೆ ಅಭಿನಂದಿಸಿದ್ದಾರೆ.
ಹಂಗೇರಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ನೀರಜ್ ಚೋಪ್ರಾ ಫೈನಲ್ ನಲ್ಲಿ 88.17 ಮೀಟರ್ ದೂರ ಎಸೆದು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತರಾಗಿದ್ದ ನೀರಜ್ ಮತ್ತೆ ಶ್ರೇಷ್ಠ ಪ್ರದರ್ಶನ ಹೊರಹಾಕಿದರು.
ನೀರಜ್ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಪ್ರಧಾನಿ ಮೋದಿ, ಭಾರತೀಯ ಸೇನೆ ಟ್ವೀಟ್ ಮಾಡಿ ನೀರಜ್ ಚೋಪ್ರಾಗೆ ಅಭಿನಂದನೆ ಸಲ್ಲಿಸಿದ್ದಾರೆ.