Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಟೋಕಿಯೋ: ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಪ್ರತಿನಿಧಿಸುತ್ತಿರುವ ಭಾರತದ ಕಮಲ್ ಪ್ರೀತ್ ಡಿಸ್ಕಸ್ ಥ್ರೋ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಅರ್ಹತಾ ಸುತ್ತಿನಲ್ಲಿ 25 ವರ್ಷದ ಕಮಲ್ ಪ್ರೀತ್ 64 ಮೀ. ದೂರ ಎಸೆತ ಎಸೆದು ಫೈನಲ್ ಹಂತಕ್ಕೆ ಅರ್ಹತೆ ಪಡೆದಿದ್ದಾರೆ. ಫೈನಲ್ ಸುತ್ತಿಗೆ ಅರ್ಹತೆ ಪಡೆದ ಒಟ್ಟು 31 ಆಟಗಾರ್ತಿಯರ ಪೈಕಿ ಕಮಲ್ ಪ್ರೀತ್ ಕೂಡಾ ಒಬ್ಬರಾಗಿದ್ದಾರೆ.
ವಿಶೇಷವೆಂದರೆ ಕಮಲ್ ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಸಾಂದ್ರಾಗಿಂತಲೂ ಅತ್ಯುತ್ತಮ ಎಸೆತ ಎಸೆದಿದ್ದಾರೆ. ಸಾಂದ್ರಾ 63.75 ಮೀ. ಗಳಷ್ಟೇ ಎಸೆದರು.