Publish Date: Mon, 02 Aug 2021 (17:33 IST)
Updated Date: Mon, 02 Aug 2021 (17:35 IST)
ಟೋಕಿಯೋ: ಭಾರತೀಯರು ಭಾರೀ ನಿರೀಕ್ಷೆ ಮಾಡುತ್ತಿರುವ ಡಿಸ್ಕಸ್ ಥ್ರೋ ಫೈನಲ್ ಸುತ್ತು ಮಳೆಯಿಂದಾಗಿ ಸ್ಥಗಿತಗೊಂಡಿದೆ.
ಎರಡನೇ ಸುತ್ತಿನ ಪಂದ್ಯದ ವೇಳೆ ಜೋರಾಗಿ ಮಳೆ ಬಂದಿದ್ದರಿಂದ ಆಟಗಾರರು ಕಣದಲ್ಲಿ ಜಾರಿ ಬೀಳುವ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಕೆಲವು ಕಾಲ ಪಂದ್ಯ ಸ್ಥಗಿತಗೊಳಿಸಲಾಗಿದೆ.
ಇದುವರೆಗೆ ಕಮಲ್ ಪ್ರೀತ್ ಕೌರ್ ಎರಡು ಸುತ್ತಿನ ಆಟ ಮುಗಿಸಿದ್ದು, ಮೊದಲ ಸುತ್ತಿನಲ್ಲಿ 61.62 ದೂರ ಎಸೆದಿದ್ದರೆ, ಎರಡನೇ ಸುತ್ತಿನಲ್ಲಿ ಫೌಲ್ ಆಗಿದ್ದು, ಮೂರನೇ ಸುತ್ತು ಆರಂಭವಾಗಬೇಕಿದೆಯಷ್ಟೇ. 68.98 ಮೀ. ಎಸೆದ ಅಮೆರಿಕಾ ತಾರೆ ವಲರಿ ಅಲ್ಮಾನ್ ಮೊದಲ ಲೀಡಿಂಗ್ ನಲ್ಲಿದ್ದಾರೆ.