ನವದೆಹಲಿ: ಭಾರತದ ಪಾಲಿಗೆ ಇಂದು ಶುಭ ಭಾನುವಾರವಾಗಿದೆ. ಇದೀಗ ಮುಕ್ತಾಯಗೊಂಡ ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರೀಸ್ ಟೂರ್ನಿಯಲ್ಲಿ ಭಾರತ ಕಿದಂಬಿ ಶ್ರೀಕಾಂತ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಆ ಮೂಲಕ ಸತತ ಎರಡನೇ ಸೂಪರ್ ಸೀರೀಸ್ ಗೆಲುವು ಕಂಡಿದ್ದಾರೆ. ಚೀನಾದ ಚೆನ್ ಲಾಂಗ್ ವಿರುದ್ಧ22-20, 21-16 ರ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಮೊದಲ ಸೆಟ್ ನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿಯಿತ್ತು. ಕೇವಲ 2 ಅಂಕಗಳ ಅಂತರದಲ್ಲಿ ಮೊದಲ ಸೆಟ್ ಕೈ ವಶ ಮಾಡಿಕೊಂಡರು. ದ್ವಿತೀಯ ಸೆಟ್ ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿದ ಶ್ರೀಕಾಂತ್ ನಾಲ್ಕು ಅಂಕಗಳ ಅಂತರ ಕಾಯ್ದುಕೊಂಡರು. ಹೀಗಾಗಿ ಅಂತಿಮವಾಗಿ ಗೆಲುವು ತಮ್ಮದಾಗಿಸಿಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ