ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಒಬ್ಬ ನಿಷ್ಕಳಂಕ ಕೋಚ್ ಆಗಿದ್ದರು ಎಂದು ಬಿಸಿಸಿಐ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರೈ ಹೇಳಿದ್ದಾರೆ.
‘ಕೋಚ್ ಆಗಿ ಅವರೊಬ್ಬ ನಿಷ್ಕಲ್ಮಶರಾಗಿದ್ದರು. ಅವರು ಭಾರತೀಯ ಕ್ರಿಕೆಟ್ ಗೆ ಒಳ್ಳೆಯದನ್ನೇ ಮಾಡಿದ್ದಾರೆ. 24 ಗಂಟೆಯೂ ಇಬ್ಬರು ಜತೆಗಿದ್ದಾರೆಂದರೆ ಅವರ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಅದೇ ರೀತಿ ಕೊಹ್ಲಿ-ಕುಂಬ್ಳೆ ನಡುವೆಯೂ ಆಗಿದೆ.
ಯಾರಿಗೇ ಆದರೂ ಒಗ್ಗಟ್ಟು ಮುಖ್ಯ. ಅಂತಿಮವಾಗಿ ಮೈದಾನದಲ್ಲಿ ಹೋರಾಡುವುದು ನಾಯಕನೇ. ಅದನ್ನು ಕುಂಬ್ಳೆ ಅರ್ಥ ಮಾಡಿಕೊಂಡು ರಾಜೀನಾಮೆ ನಿರ್ಧಾರ ಮಾಡಿದ್ದಾರೆ. ಅದರಲ್ಲಿ ವಿಶೇಷವೇನಿಲ್ಲ. ಹೇಗಿದ್ದರೂ ಅವರ ಗುತ್ತಿಗೆ ಅವಧಿ ಮುಗಿದಿತ್ತು. ಅದರ ನಂತರ ಅವರು ಮುಂದುವರಿಯಲು ಬಯಸಿಲ್ಲ’ ಎಂದು ವಿನೋದ್ ರೈ ವಿವಾದಕ್ಕೆ ತೇಪೆ ಹಾಕುವ ಪ್ರಯತ್ನ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ