ಟೋಕಿಯೋ: 41 ವರ್ಷಗಳ ಬಳಿಕ ಸೆಮಿಫೈನಲ್ ತಲುಪಿ ಇತಿಹಾಸ ಸೃಷ್ಟಿಸಿದ್ದ ಭಾರತ ಪುರುಷರ ಹಾಕಿ ತಂಡ ಸೆಮಿಫೈನಲ್ ನಲ್ಲಿ ಬೆಲ್ಜಿಯಂ ಎದುರು ಮುಗ್ಗರಿಸಿದೆ.
ಅಂತಿಮ ಕ್ಷಣದವರೆಗೂ ಹೋರಾಡಿದ ಭಾರತ ಕೊನೆಗೆ ಎದುರಾಳಿಗಳಿಗೆ 2-5 ಅಂತರದಿಂದ ಸೋಲು ಅನುಭವಿಸಿತು. ಮೊದಲಾರ್ಧದಲ್ಲಿ ಸ್ಕೋರ್ 2-2 ರಿಂದ ಸಮಬಲಗೊಂಡಿತ್ತು.
ದ್ವಿತೀಯಾರ್ಧದಲ್ಲಿ ಯಾವುದೇ ಗೋಲು ಎರಡೂ ತಂಡಗಳಿಂದ ದಾಖಲಾಗಲಿಲ್ಲ. ಆದರೆ ಅಂತಿಮ ಹಾಫ್ ನಲ್ಲಿ ಬೆಲ್ಜಿಯಂ ತನಗೆ ಸಿಕ್ಕ ಪೆನಾಲ್ಟಿ ಕಾರ್ನರ್ ರನ್ನು ಸರಿಯಾಗಿ ಬಳಸಿಕೊಂಡು ಮೂರು ಗೋಲುಗಳನ್ನು ಪಡೆದುಕೊಂಡಿತು. ಇದರೊಂದಿಗೆ ಭಾರತ ಫೈನಲ್ ತಲುಪುವ ಅವಕಾಶ ಕೈ ತಪ್ಪಿತು. ಇದೀಗ ಭಾರತ ಆಗಸ್ಟ್ 5 ರಂದು ಕಂಚಿನ ಪದಕಕ್ಕಾಗಿ ಆಸ್ಟ್ರೇಲಿಯಾ-ಜರ್ಮನಿ ನಡುವಿನ ಪಂದ್ಯದಲ್ಲಿ ಸೋತ ತಂಡದ ಜೊತೆಗೆ ಸೆಣಸಾಡಲಿದೆ.