ಟೋಕಿಯೋ: ಕೊರೋನಾದಿಂದಾಗಿ ಈಗ ಶೇಕ್ ಹ್ಯಾಂಡ್ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಇದರ ಇಫೆಕ್ಟ್ ಒಲಿಂಪಿಕ್ಸ್ ನಲ್ಲೂ ಕಂಡುಬಂದಿದೆ.
ಪರಿಣಾಮ ವಿದೇಶೀ ಆಟಗಾರರೂ ಭಾರತದ ನಮಸ್ಕಾರ ಮಾಡುವ ಪದ್ಧತಿಗೆ ಮೊರೆ ಹೋಗಿದ್ದಾರೆ. ಆಟ ಮುಗಿದ ಮೇಲೆ ಅಥವಾ ಆಟಕ್ಕೆ ಮುನ್ನ ಆಟಗಾರರು ಸಾಮಾನ್ಯವಾಗಿ ಶೇಕ್ ಹ್ಯಾಂಡ್ ಮಾಡುವ ಪದ್ಧತಿ.
ಆದರೆ ಈಗ ಎಲ್ಲಾ ಆಟಗಾರರೂ ನಮಸ್ಕಾರ ಮಾಡುವ ಮೂಲಕ ಭಾರತದ ಸಂಸ್ಕಾರವನ್ನು ಅನುಸರಿಸುತ್ತಿರುವುದು ವಿಶೇಷ. ಎಲ್ಲಾ ಕೊರೋನಾ ಮಹಿಮೆ ಎಂದರೂ ತಪ್ಪಾಗಲಾರದು.