ನವದೆಹಲಿ: ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾಗಿಯಾಗಲು ಭಾರತೀಯ ಕ್ರೀಡಾ ಪಟುಗಳ ಮೊದಲ ತಂಡ ಜುಲೈ 17 ರಂದು ಪ್ರಯಾಣ ಬೆಳೆಸಲಿದೆ.
ಜುಲೈ 17 ರಂದು ಏರ್ ಇಂಡಿಯಾ ವಿಮಾನದಲ್ಲಿ ಟೋಕಿಯೋಗೆ ಭಾರತೀಯ ಅಥ್ಲಿಟ್ ಗಳ ಮೊದಲ ತಂಡ ಪ್ರಯಾಣ ಬೆಳೆಸಲಿದೆ. ಜುಲೈ 23 ರಂದು ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವಿದೆ.
ಈಗಾಗಲೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಅಥ್ಲೆಟ್ ಗಳೊಂದಿಗೆ ಪ್ರಧಾನಿ ಮೋದಿ ಸಂವಹನ ನಡೆಸಿ ಸ್ಪೂರ್ತಿ ತುಂಬಿದ್ದಾರೆ. ಈ ಬಾರಿ ಭಾರತ ತನ್ನ ಪದಕದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.