Webdunia - Bharat's app for daily news and videos

Install App

ತಾಯ್ನಾಡಿಗೆ ವಾಪಾಸ್ಸಾಗಲು ವಿಮಾನವೇರಿದ ಹಾಕಿ ತಂಡಕ್ಕೆ ವಿಮಾನದಲ್ಲೇ ಕಾದಿತ್ತು ಬಿಗ್ ಸರ್ಪ್ರೈಸ್‌

Sampriya
ಶನಿವಾರ, 10 ಆಗಸ್ಟ್ 2024 (15:52 IST)
Photo Courtesy X
ನವದೆಹಲಿ: ಕಂಚಿನ ಪದಕದೊಂದಿಗೆ ತಾಯ್ನಾಡಿಗೆ ಮರುಳುತ್ತಿರುವ ಭಾರತದ ಪುರುಷರ ಹಾಕಿ ತಂಡಕ್ಕೆ ಏರ್‌ ಇಂಡಿಯಾ ವಿಮಾನದಲ್ಲಿ ವಿಶೇಷ ಗೌರವನ್ನು ಸಲ್ಲಿಸಲಾಯಿತು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪೇನ್‌ನನ್ನು 2-1 ಗೋಲುಗಳಿಂದ ಸೋಲಿಸಿದ ಕಂಚಿನ ಪದಕವನ್ನು ಪಡೆಯುತ್ತಿದ್ದ ಹಾಗೇ ಭಾರತದಾದ್ಯಂತ ಸಂಭ್ರಮ ಮನೆ ಮಾಡಿತು. ಇದೀಗ ತಾಯ್ನಾಡಿಗೆ ಮರಳಲು ಹಾಕಿ ಆಟಗಾರರು ಏರ್‌ ಇಂಡಿಯಾ ವಿಮಾನವೇರಿದ್ದಾರೆ.

ಹೆಮ್ಮೆ ತಂಡ ಭಾರತ ಹಾಕಿ ಆಟಗಾರರು ವಿಮಾನವನ್ನು ಏರುತ್ತಿದ್ದ ಹಾಗೇ ಪೈಲಟ್ ವಿಶೇಷ ಪ್ರಕಟಣೆಯೊಂದಿಗೆ ಅವರನ್ನು ಸ್ವಾಗತಿಸಿದರು.  ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಕಂಚಿನ ಪದಕವನ್ನು ಮನೆಗೆ ತಂದಿದ್ದಕ್ಕಾಗಿ ಭಾರತೀಯ ಹಾಕಿ ತಂಡಕ್ಕೆ ಧನ್ಯವಾದ ಅರ್ಪಿಸಿದರು. ನೀವು ನಿಜವಾಗಿಯೂ ದೇಶಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಘೋಷಿಸಿದರು.

ಪೈಲಟ್‌ ಅವರು ಈ ಮಾತು ಹೇಳುತ್ತಿದ್ದ ಹಾಗೇ ವಿಮಾನದಲ್ಲಿದ್ದ ಪ್ರಯಾಣಿಕರು ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸಿದರು. ಇದನ್ನು ನೋಡಿದ ಆಟಗಾರರು ಆಶ್ಚರ್ಯಚಕಿತರಾದರು. ಭಾರಿ ಚಪ್ಪಾಳೆಗಳ ಸುರಿಮಳೆಯಲ್ಲಿ ವಿಮಾನ ಸಿಡಿಯುತ್ತಿದ್ದಂತೆ ಆಟಗಾರರು ಹರ್ಷೋದ್ಗಾರದಲ್ಲಿ ಮುಳುಗಿದರು.

ಅವರು ಭಾರತಕ್ಕೆ ಬಂದಿಳಿದ ನಂತರ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಆಟಗಾರರನ್ನು ಅದ್ಧೂರಿ ಸ್ವಾಗತದೊಂದಿಗೆ ಸ್ವಾಗತಿಸಲಾಯಿತು.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಮುಂದಿನ ಸುದ್ದಿ
Show comments