ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆ ಏರಿಸಿದ ಜ್ವಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾಗೆ ಈಗ ಬಹುಮಾನಗಳ ಸುರಿಮಳೆಯಾಗುತ್ತಿದೆ.
ನೀರಜ್ ಚಿನ್ನದ ಪದಕ ಗೆದ್ದ ಬೆನ್ನಲ್ಲೇ ಅವರ ತವರು ಹರ್ಯಾಣ ರಾಜ್ಯ ಸರ್ಕಾರ 6 ಕೋಟಿ ರೂ.ಗಳ ಬಹುಮಾನ ಮೊತ್ತ ಘೋಷಿಸಿತ್ತು. ಇನ್ನು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ 1 ಕೋಟಿ ರೂ. ಪಂಜಾಬ್ ಸರ್ಕಾರ 2 ಕೋಟಿ ರೂ., ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 1 ಕೋಟಿ ರೂ., ಮಣಿಪುರ ಸರ್ಕಾರ 1 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದ್ದಾರೆ.
ಇನ್ನು, ಕ್ರೀಡಾಳುಗಳಿಗೆ ಸದಾ ಪ್ರೋತ್ಸಾಹ ನೀಡುವ ಉದ್ಯಮಿ ಆನಂದ್ ಮಹೀಂದ್ರಾ ನೂತನ ಎಕ್ಸ್ ಯುವಿ 700 ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ್ದಾರೆ. ಇನ್ನು, ಪ್ರಮುಖ ವೈಮಾನಿಕ ಸಂಸ್ಥೆ ಇಂಡಿಗೋ ನೀರಜ್ ಗೆ ಜೀವನಮಾನ ಪರ್ಯಂತ ಉಚಿತ ಪ್ರಯಾಣದ ಆಫರ್ ನೀಡಿದೆ. ಮುಂದೆ ಈ ಪಟ್ಟಿ ಮತ್ತಷ್ಟು ಬೆಳೆಯುತ್ತಾ ಹೋಗಬಹುದು.