Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೋಣಿ ಸ್ಪರ್ಧೆಯ ಕ್ವಾ. ಫೈನಲ್‌ನಲ್ಲಿ ದತ್ತು 4ನೇ ಸ್ಥಾನ, ಪದಕದಿಂದ ವಂಚಿತ

ದೋಣಿ ಸ್ಪರ್ಧೆಯ ಕ್ವಾ. ಫೈನಲ್‌ನಲ್ಲಿ ದತ್ತು 4ನೇ ಸ್ಥಾನ, ಪದಕದಿಂದ ವಂಚಿತ
ರಿಯೊ ಡಿ ಜನೈರೊ , ಮಂಗಳವಾರ, 9 ಆಗಸ್ಟ್ 2016 (18:32 IST)
ರಿಯೊ ಒಲಿಂಪಿಕ್ಸ್ ಪುರುಷರ ದೋಣಿ ಸ್ಪರ್ಧೆಯ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ದತ್ತು ಬೊಕನಲ್  ನಾಲ್ಕನೇ ಸ್ಥಾನ ಗಳಿಸಿದ್ದು, ಪದಕದ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ದತ್ತು 6: 59.89 ನಿಮಿಷಗಳಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಗಳಿಸಿದ ಪೋಲೆಂಡ್ ನಾಟನ್ ವೆಗ್‌ರಿಜ್ಕಿಗಿಂತ 6 ಸೆಕೆಂಡ್ಸ್ ಹಿಂದುಳಿದರು.

ಇದರ ಫಲವಾಗಿ ಬೊಕನಲ್ ಸೆಮಿಫೈನಲ್ ಸಿ/ಡಿಗೆ ಪ್ರವೇಶಿಸಿದ್ದು, ಶ್ರೇಯಾಂಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಆದರೆ ಪದಕ ಗೆಲ್ಲುವುದಕ್ಕೆ ಅವಕಾಶವಿರುವ ಸೆಮಿಫೈನಲ್ ಎ/ಬಿಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ.
 
ಮೊದಲ 500 ಮೀಟರ್‌ವರೆಗೆ ಮೂರನೇ ಸ್ಥಾನದಲ್ಲಿದ್ದ ದತ್ತು ಬಳಿಗ ವೇಗ ಮತ್ತು ತೀವ್ರತೆ ತಗ್ಗಿದ್ದರಿಂದ ಟಾಪ್ 3 ಮುಟ್ಟುವ ಅವಕಾಶ ಕಳೆದುಕೊಂಡರು. 1000 ಮೀ ಹಂತದಲ್ಲಿ 3: 23.66 ಸಮಯದಲ್ಲಿ ತಲುಪಿದ್ದರು. 1500 ಮೀಟರ್ ದೂರವನ್ನು 5: 11.68 ನಿಮಿಷದಲ್ಲಿ ಕ್ರಮಿಸಿದ್ದರು. ಆದರೆ ಅಂತಿಮ ಗೆರೆಯ ಹತ್ತಿರ ಯಾವುದೇ ಪ್ರಗತಿ ಸಾಧಿಸದೇ ಹಿಂದುಳಿದರು. ಕ್ರೊವೇಷಿಯಾದ ಡಮಿರ್ ಮಾರ್ಟಿನ್ 6:44.44 ಸಮಯದಲ್ಲಿ ಮುಟ್ಟಿ ಟಾಪ್ ಸ್ಥಾನ ಗಳಿಸಿದರು ಮತ್ತು ಗ್ರೇಟ್ ಬ್ರಿಟನ್ ಅಲನ್ ಕ್ಯಾಂಪ್‌ಬೆಲ್ 6: 49.41 ಸಮಯದಲ್ಲಿ ಮುಟ್ಟಿ ಎರಡನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
 

Share this Story:

Follow Webdunia kannada

ಮುಂದಿನ ಸುದ್ದಿ

ರಿಯೊದಲ್ಲಿ ''ಸುವರ್ಣ'' ಅವಕಾಶ ಹಿಡಿಯುವುದು ಸೈನಾ ನೆಹ್ವಾಲ್ ಗುರಿ