Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಿಯೊದಲ್ಲಿ ''ಸುವರ್ಣ'' ಅವಕಾಶ ಹಿಡಿಯುವುದು ಸೈನಾ ನೆಹ್ವಾಲ್ ಗುರಿ

ರಿಯೊದಲ್ಲಿ ''ಸುವರ್ಣ'' ಅವಕಾಶ ಹಿಡಿಯುವುದು ಸೈನಾ ನೆಹ್ವಾಲ್ ಗುರಿ
ರಿಯೊ ಡಿ ಜನೈರೊ , ಮಂಗಳವಾರ, 9 ಆಗಸ್ಟ್ 2016 (17:19 IST)
ಭಾರತದ ಅತ್ಯಂತ ಯಶಸ್ವಿ ಬ್ಯಾಡ್ಮಿಂಟನ್ ಪಟು ಸೈನಾ ನೆಹ್ವಾಲ್ 2008ರ ಒಲಿಂಪಿಕ್ಸ್‌ನಲ್ಲಿ ಸ್ವಲ್ಪದರಲ್ಲಿ ಪದಕ ಮಿಸ್ ಮಾಡಿಕೊಂಡಿದ್ದರು. ಕೋರ್ಟ್‌ನಲ್ಲಿ ಶ್ರಮಪಟ್ಟು ಆಡುವ ನೆಹ್ವಾಲ್ ನಾಲ್ಕು ವರ್ಷಗಳ ಹಿಂದೆ ಲಂಡನ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಕೆಲವು ವರ್ಷಗಳಿಂದ ಮೇಲುಗೈ ಪ್ರದರ್ಶನ ನೀಡುತ್ತಿರುವ ಸೈನಾ 2016ರ ರಿಯೊದಲ್ಲಿ ಚಿನ್ನದ ಪದಕದ ಗುರಿ ಇರಿಸಿಕೊಂಡಿದ್ದಾರೆ. 
 
ಲಂಡನ್‌ನಲ್ಲಿ ಸೈನಾ ಪದಕ ಗೆದ್ದಾಗ ಸ್ವದೇಶದಲ್ಲಿ ಸಂಭ್ರಮಾಚಣೆ ಮಾಡಲಾಯಿತು. ಕಳೆದ ಏಪ್ರಿಲ್‌ನಲ್ಲಿ ವಿಶ್ವ ಸಿಂಗಲ್ಸ್ ಶ್ರೇಯಾಂಕದಲ್ಲಿ ಟಾಪ್ ಸ್ಥಾನಕ್ಕೆ ಹೋಗಿದ್ದು ಕಡಿಮೆ ಸಾಧನೆಯೇನೂ ಅಲ್ಲ. ಚೀನಿಯರಲ್ಲದ ಶಟ್ಲರ್ ಮಹಿಳಾ ಸಿಂಗಲ್ಸ್ ಶ್ರೇಯಾಂಕದಲ್ಲಿ ಮೇಲುಗೈ ಸಾಧಿಸಿದ್ದು ಇದು ಮೊದಲ ಬಾರಿಯಾಗಿತ್ತು. 
 
ರಿಯೊ ಸೈನಾಗೆ ಮೂರನೇ ಒಲಿಂಪಿಕ್ ಆಗಿದ್ದು, ಸರಿಯಾದ ಸಮಯದಲ್ಲಿ ಸೈನಾ ಪೂರ್ಣ ಪ್ರಮಾಣದ ಫಾರಂನಲ್ಲಿದ್ದಾರೆ.
 ಸೈನಾ ಅವರ ಎರಡನೇ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿಯಲ್ಲಿ ವಿಶ್ವ ಚಾಂಪಿಯನ್ನರಾದ ರಚನೋಕ್ ಇಂಟಾನೊನ್ ಮತ್ತು ವಾಂಗ್ ಯಿಹಾನ್ ಅವರನ್ನು ಸೋಲಿಸಿದ್ದರು.

ಸಿಡ್ನಿಯಲ್ಲಿ ನಡೆದ ಫೈನಲ್‌ನಲ್ಲಿ ಚೀನಾದ ಸುನ್ ರುವನ್ನು ಸೋಲಿಸಿ ಪ್ರಶಸ್ತಿ ಗಳಿಸಿದ್ದರು. ಸೈನಾ ಗಮನ ಈಗ ರಿಯೊದತ್ತ ಹರಿದಿದ್ದು, ಚಿನ್ನದ ಪದಕದೊಂದಿಗೆ ಭಾರತದಲ್ಲಿ ವಿಜಯೋತ್ಸವ ಆಚರಣೆಯ ಕಿಡಿ ಹೊತ್ತಿಸುವ ಆಶಯ ಹೊಂದಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿಯ ಐವರು ಬೌಲರುಗಳ ಸಿದ್ಧಾಂತಕ್ಕೆ ಬೆಂಬಲಿಸಿದ ಮೊಹಮ್ಮದ್ ಶಮಿ