ನವದೆಹಲಿ: ಜಕಾರ್ತದಲ್ಲಿ ನಡೆಯುತ್ತಿರುವ 2018 ನೇ ಏಷ್ಯನ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಇಂದು 10 ಮೀ. ಏರ್ ರೈಫಲ್ ವಿಭಾಗದಲ್ಲಿ ದೀಪಕ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ.
ನಿನ್ನೆ ಅಪರಾಹ್ನ ನಡೆದ 65 ಕೆ.ಜಿ. ವಿಭಾಗದ ಕುಸ್ತಿ ಪಂದ್ಯದಲ್ಲಿ ಭಾರತದ ಭಜರಂಗ್ ಪೂನಿಯಾ ಚಿನ್ನ ಗೆದ್ದುಭಾರತಕ್ಕೆ ಮೊದಲ ಚಿನ್ನದ ಪದಕ ಗಳಿಸಿಕೊಟ್ಟಿದ್ದರು. ಮೊದಲ ಚಿನ್ನ ಗೆದ್ದ ಪೂನಿಯಾಗೆ ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ದೀಪಕ್ ಕುಮಾರ್ ಬೆಳ್ಳಿ ತಮ್ಮದಾಗಿಸಿಕೊಂಡಿದ್ದಾರೆ. ನಿನ್ನೆ 10 ಮೀ. ಏರ್ ರೈಫಲ್ ಶೂಟಿಂಗ್ ಮಿಶ್ರ ವಿಭಾಗದಲ್ಲಿ ಭಾರತ ಕಂಚು ಗೆದ್ದಿತ್ತು. ಆ ಮೂಲಕ ಒಂದು ಬೆಳ್ಳಿ, ಕಂಚು, ಚಿನ್ನದ ಪದಕದೊಂದಿಗೆ ಭಾರತ ಮೂರು ಪದಕ ಗೆದ್ದುಕೊಂಡಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.