ಟ್ರೆಂಟ್ ಬ್ರಿಡ್ಜ್: ಪದಾರ್ಪಣೆ ಪಂದ್ಯವೆಂದರೆ ಎಲ್ಲರಿಗೂ ಒಂದು ರೀತಿಯ ನರ್ವಸ್ ಇದ್ದೇ ಇರುತ್ತದೆ. ಆದರೆ ಈ ಡೆಲ್ಲಿ ಡ್ಯಾಶರ್ ರಿಷಬ್ ಪಂತ್ ಗೆ ಇದೇನೂ ಇಲ್ಲ ಎನ್ನುವುದು ಮೊದಲ ಪಂದ್ಯದಲ್ಲೇ ಸಾಬೀತಾಗಿದೆ.
ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ಸ್ಥಾನ ಗಿಟ್ಟಿಸಿಕೊಂಡ ರಿಷಬ್ ಪಂತ್ ವಿರಾಟ್ ಕೊಹ್ಲಿ ಔಟಾದ ಬಳಿಕ ಕ್ರೀಸ್ ಗಿಳಿದರು. ಆ ತುದಿಯಲ್ಲಿ ಹಾರ್ದಿಕ್ ಪಾಂಡ್ಯ ಇದ್ದರು. ತಮಗೆ ಬ್ಯಾಟಿಂಗ್ ಚಾನ್ಸ್ ಸಿಕ್ಕಿದಾಗ ಅದೂ ಪದಾರ್ಪಣೆ ಪಂದ್ಯದಲ್ಲಿ ಎರಡನೇ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿ ವಿಶಿಷ್ಟ ದಾಖಲೆಯನ್ನು ಮಾಡಿದರು.
ಪದಾರ್ಪಣೆ ಪಂದ್ಯದಲ್ಲಿ ಮೊದಲ ರನ್ ಸಿಕ್ಸರ್ ಮೂಲಕವೇ ಪಡೆದ ವಿಶ್ವದ 12 ನೇ ಆಟಗಾರ ಎಂಬ ದಾಖಲೆಗೆ ಪಂತ್ ಪಾತ್ರರಾದರು. ಅದೂ ಆಗಷ್ಟೇ ವಿರಾಟ್ ಕೊಹ್ಲಿಯನ್ನು 97 ರನ್ ಗಳಿಗೆ ಔಟ್ ಮಾಡಿ ಶಾಕ್ ಕೊಟ್ಟಿದ್ದ ಸ್ಪಿನ್ನರ್ ಅದಿಲ್ ರಶೀದ್ ಬೌಲಿಂಗ್ ನಲ್ಲಿ ಪಂತ್ ಈ ಸಾಹಸ ಮಾಡಿದ್ದಾರೆ. ಅಂತಿಮವಾಗಿ ದಿನದಂತ್ಯಕ್ಕೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 307 ರನ್ ಗಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.