ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಭಾರತ – ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದೆ. 18 ರನ್ ಗಳ ಅಂತರದಿಂಗ ನ್ಯೂಜಿಲೆಂಡ್ ಗೆಲುವನ್ನು ತನ್ನದಾಗಿಸಿಕೊಂಡಿದೆ.
ನ್ಯೂಜಿಲೆಂಡ್ 46.1 ಓವರ್ ಗಳಲ್ಲಿ 211 ರನ್ ಗಳಿಸಿದ್ದಾಗ ಮಳೆ ಬಂದಿದ್ದರಿಂದ ಪಂದ್ಯ ಅರ್ಧಕ್ಕೇ ಸ್ಥಗಿತಗೊಂಡಿತು. ಮೀಸಲು ದಿನವಾದ ಇಂದು ಪಂದ್ಯ ಆರಂಭವಾಗಿದ್ದರೂ ಭಾರತದ ಪಾಲಿಗೆ ಆಘಾತಕಾರಿಯಾಗಿದೆ. ಇಂದು 50 ಓವರ್ ಗಳ ಕೋಟಾ ಪೂರೈಸಿದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿತು.
ಗುರಿ ಬೆನ್ನತ್ತಿದ್ದ ಭಾರತ ತಂಡಕ್ಕೆ ಆರಂಭದಲ್ಲೇ ವಿಕೆಟ್ ಗಳು ಉರುಳಿದವು. ಒಬ್ಬರಾದ ಮೇಲೋಬ್ಬರಂತೆ ಪೆವಿಲಿಯನ್ ಹಾದಿ ತುಳಿದ್ರು. ಹೀಗಾಗಿ ಭಾರತ ತಂಡ ಸೋಲಿನ ರುಚಿ ಕಂಡಿತು.
ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ 77 ರನ್ ಗಳಿಸಿ ನಿರ್ಗಮಿಸಿದ್ರು. ಇವರಿಗೆ ಎಂ.ಎಸ್.ಧೋನಿ ಸಾಥ್ ನೀಡಿದ್ರು. ಇವರಿಬ್ಬರೂ 119 ರನ್ ಗಳ ಜತೆಯಾಟ ಆಡುವ ಮೂಲಕ ಭಾರತ ತಂಡಕ್ಕೆ ಆಸರೆಯಾದ್ರು. ಮಹೇಂದ್ರ ಸಿಂಗ್ ಧೋನಿ 50 ರನ್ ಗಳಿಸಿ ರನ್ ಔಟಾದ್ರು. ಉಳಿದಂತೆ ಯಾರೂ 50 ರ ಗಡಿ ದಾಟಿ ರನ್ ಗಳಿಸಲಿಲ್ಲ.
ನ್ಯೂಜಿಲೆಂಡ್ ನೀಡಿದ ಮೊತ್ತವನ್ನು ಭಾರತದ ಬಲಾಢ್ಯ ಬ್ಯಾಟ್ಸ್ ಮನ್ ಗಳು ಸುಲಭವಾಗಿ ಬೆನ್ನತ್ತಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ತನ್ನ ಸರದಿ ಆರಂಭಿಸಿದ ಭಾರತ ಆರಂಭದಲ್ಲೇ ಮುಗ್ಗರಿಸಿತು.
18 ರನ್ ಗಳಿಂದ ನ್ಯೂಜಿಲೆಂಡ್ ಗೆಲುವು ತನ್ನದಾಗಿಸಿಕೊಂಡಿತು.
ಅದರಲ್ಲೂ ಇನ್ ಫಾರ್ಮ್ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಪೆವಿಲಿಯನ್ ಸೇರಿಕೊಂಡಿರುವುದು ಭಾರತದ ಪಾಲಿಗೆ ದೊಡ್ಡ ಆಘಾತವಾಗಿದೆ. ಹಿಂದೆ ಪಾಕಿಸ್ತಾನ ವಿರುದ್ಧವೂ ಭಾರತ ರನ್ ಚೇಸ್ ಮಾಡುವಾಗ ಇದೇ ಪರಿಸ್ಥಿತಿ ಎದುರಾಗಿತ್ತು.
ಆಗ ಭಾರತ ಹೀನಾಯ ಸೋಲುಂಡಿದ್ದನ್ನು ಅಭಿಮಾನಿಗಳು ಮರೆತಿಲ್ಲ. ಈಗಲೂ ಭಾರತ ತಂಡ ಹೆಚ್ಚು ಕಮ್ಮಿ ಅದೇ ಪರಿಸ್ಥಿತಿಯನ್ನು ಮರುಕಳಿಸುವಂತೆ ಮಾಡಿತು.