ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಸೆಣಸುತ್ತಿರುವ ಭಾರತ – ನ್ಯೂಜಿಲೆಂಡ್ ನಡುವಿನ ಕದನ ಹೈವೋಲ್ಟೇಜ್ ಟೆನ್ಶನ್ ಸೃಷ್ಟಿ ಮಾಡಿದೆ. ಧೋನಿ ಹಾಗೂ ಜಡೇಜಾ 100 ರನ್ ಜತೆಯಾಟ ಆಡುತ್ತಿದ್ದಾರೆ.
ನಿನ್ನೆ ನ್ಯೂಜಿಲೆಂಡ್ 46.1 ಓವರ್ ಗಳಲ್ಲಿ 211 ರನ್ ಗಳಿಸಿದ್ದಾಗ ಮಳೆ ಬಂದಿದ್ದರಿಂದ ಪಂದ್ಯ ಅರ್ಧಕ್ಕೇ ಸ್ಥಗಿತಗೊಂಡಿತು. ಮೀಸಲು ದಿನವಾದ ಇಂದು ಪಂದ್ಯ ಆರಂಭವಾಗಿದ್ದರೂ ಭಾರತದ ಪಾಲಿಗೆ ಆಘಾತಕಾರಿಯಾಗಿದೆ. ಇಂದು 50 ಓವರ್ ಗಳ ಕೋಟಾ ಪೂರೈಸಿದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿತು.
ಈ ಮೊತ್ತವನ್ನು ಭಾರತದ ಬಲಾಢ್ಯ ಬ್ಯಾಟ್ಸ್ ಮನ್ ಗಳು ಸುಲಭವಾಗಿ ಬೆನ್ನತ್ತಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ತನ್ನ ಸರದಿ ಆರಂಭಿಸಿ ಭಾರತ ಇತ್ತೀಚೆಗಿನ ವರದಿ ಬಂದಾಗ ಪ್ರಮುಖ 6 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿ ಹೀನಾಯ ಸ್ಥಿತಿಯಲ್ಲಿದೆ.
24 ಬಾಲ್ ಗಳಲ್ಲಿ 42 ರನ್ ಗಳಿಸಬೇಕಾದ ಒತ್ತಡದಲ್ಲಿ ಭಾರತ ಸಿಲುಕಿದೆ.
ಅದರಲ್ಲೂ ಇನ್ ಫಾರ್ಮ್ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಪೆವಿಲಿಯನ್ ಸೇರಿಕೊಂಡಿರುವುದು ಭಾರತದ ಪಾಲಿಗೆ ದೊಡ್ಡ ಆಘಾತವಾಗಿದೆ. ಹಿಂದೆ ಪಾಕಿಸ್ತಾನ ವಿರುದ್ಧವೂ ಭಾರತ ರನ್ ಚೇಸ್ ಮಾಡುವಾಗ ಇದೇ ಪರಿಸ್ಥಿತಿ ಎದುರಾಗಿತ್ತು. ಆಗ ಭಾರತ ಹೀನಾಯ ಸೋಲುಂಡಿದ್ದನ್ನು ಅಭಿಮಾನಿಗಳು ಮರೆತಿಲ್ಲ. ಈಗಲೂ ಭಾರತ ತಂಡ ಹೆಚ್ಚು ಕಮ್ಮಿ ಅದೇ ಪರಿಸ್ಥಿತಿಯಲ್ಲಿದೆ.