Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೀಂ ಇಂಡಿಯಾ ಮುಖ್ಯ ಕೋಚ್ ಆಯ್ಕೆ

ಟೀಂ ಇಂಡಿಯಾ ಮುಖ್ಯ ಕೋಚ್ ಆಯ್ಕೆ
ಮುಂಬೈ , ಶನಿವಾರ, 18 ಸೆಪ್ಟಂಬರ್ 2021 (10:36 IST)
ಮುಂಬೈ : ಭಾರತದ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ರವಿ ಶಾಸ್ತ್ರಿ ಅವರ ಅಧಿಕಾರದ ಮುಗಿಯುವ ಸಮಯವಾಗಿದೆ. ಮುಂದಿನ ಟಿ20 ವಿಶ್ವಕಪ್ ಬಳಿಕ ರವಿ ಶಾಸ್ತ್ರಿ ಅವರ ಕೋಚ್ ಅಧಿಕಾರ ಮುಗಿಯಲಿದೆ. ಹೀಗಾಗಿ ಬಿಸಿಸಿಐ ಹೊಸ ಕೋಚ್ ಗಾಗಿ ಶೋಧ ಕಾರ್ಯ ಆರಂಭಿಸಿದೆ.

ಹಲವರ ಹೆಸರುಗಳು ಈಗಾಗಲೇ ಮುಖ್ಯ ಕೋಚ್ ಹುದ್ದೆಗೆ ಕೇಳಿ ಬರುತ್ತಿದೆ. ಮೂಲಗಳ ಪ್ರಮುಖ ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ ಮತ್ತು ವಿವಿಎಸ್ ಲಕ್ಷ್ಮಣ್ ಹೆಸರು ಪ್ರಮುಖವಾಗಿದೆ.
ಅದರಲ್ಲೂ ಅನಿಲ್ ಕುಂಬ್ಳೆ ಅವರ ಹೆಸರು ಹೆಚ್ಚು ಕೇಳಿಬರುತ್ತಿದೆ. ಅನಿಲ್ ಕುಂಬ್ಳೆ ಆಯ್ಕೆಗೆ ಬಿಸಿಸಿಐ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಎಲ್ಲರ ಒಪ್ಪಿಗೆ ದೊರೆತಿದೆ. ಹೀಗಾಗಿ ಬಿಸಿಸಿಐ ತನ್ನ ಪ್ರಸ್ತಾವನೆಯನ್ನು ಅನಿಲ್ ಕುಂಬ್ಳೆಯವರಿಗೆ ಕಳುಹಿಸಿಕೊಟ್ಟಿದೆ ಎನ್ನಲಾಗಿದೆ.
2016-17 ರ ನಡುವೆ ಒಂದು ವರ್ಷದ ಕಾಲ ಕುಂಬ್ಳೆ ಅವರು ಭಾರತೀಯ ತಂಡದ ಕೋಚ್ ಆಗಿದ್ದರು. ಆದರೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿನ ನಂತರ ನಾಯಕ ವಿರಾಟ್ ಕೊಹ್ಲಿಯೊಂದಿಗಿನ ವೈಮನಸ್ಸು ಕುಂಬ್ಳೆ ಅವರ ರಾಜೀನಾಮೆಗೆ ಕಾರಣವಾಗಿತ್ತು. ಕೊಹ್ಲಿಯ ಒತ್ತಡದ ಕಾರಣಕ್ಕೆ ಮತ್ತು ಕುಂಬ್ಳೆಯವರನ್ನು ಹುದ್ದೆಯಿಂದ ತೆಗೆದುಹಾಕಿದ ರೀತಿಯು ಸರಿಯಾದ ನಡೆಯಾಗಿರಲಿಲ್ಲ. ಹೀಗಾಗಿ ಬಿಸಿಸಿಐ ಮತ್ತೆ ಕುಂಬ್ಳೆ ಕಡೆಗೆ ಒಲವು ತೋರಿದೆ. ಆದಾಗ್ಯೂ ಇದು ಕುಂಬ್ಳೆ ಅಥವಾ ಲಕ್ಷ್ಮಣ್ ಅವರು ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಿದ್ಧರಿದ್ದಾರೆಯೇ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಬಿಸಿಸಿಐನ ಹಿರಿಯ ಮೂಲಗಳು ತಿಳಿಸಿದೆ.
ಭಾರತೀಯ ಕೋಚ್ ನನ್ನೇ ಆಯ್ಕೆ ಮಾಡುವುದು ಬಿಸಿಸಿಐನ ಮೊದಲ ಗುರಿಯಾಗಿದೆ. ವಿದೇಶಿ ಕೋಚ್ ಎರಡನೇ ಆಯ್ಕೆಯಾಗಿದೆ. ಬಿಸಿಸಿಐನ ಕೋಚ್ ಕೆಲಸಕ್ಕೆ ಮಾನದಂಡವೆಂದರೆ ಉತ್ತಮ ಆಟಗಾರ ಮತ್ತು ತರಬೇತುದಾರ/ ಮಾರ್ಗದರ್ಶನದ ಅನುಭವ ಹೊಂದಿರುವ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂದು ಮೂಲಗಳು ತಿಳಿಸಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯಿಂದ ದುಬೈನಲ್ಲಿ ಐಪಿಎಲ್ ಕಲರವ : ಈ ಸಲ RCB ಗೆಲ್ಲುತ್ತಾ.?