ನಾಯಕ ಕರಣ್ ಶರ್ಮ ಅವರ ಅಜೇಯ 93 ರನ್ ಗಳ ನೆರವಿನಿಂದ ಉತ್ತರ ಪ್ರದೇಶ ೫ ವಿಕೆಟ್ ಗಳಿಂದ ಕರ್ನಾಟಕ ತಂಡವನ್ನು ಸೋಲಿಸಿ ರಣಜಿ ಟ್ರೋಫಿ ಸೆಮಿಫೈನಲ್ ಪ್ರವೇಶಿಸಿದೆ.
ಬೆಂಗಳೂರಿನಲ್ಲಿ ನಡೆದ ಕ್ವಾಟರ್ ಫೈನಲ್ ನಲ್ಲಿ 213 ರನ್ ಗಳ ಗುರಿ ಬೆಂಬತ್ತಿದ ಉತ್ತರ ಪ್ರದೇಶ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಮೊದಲ ಇನಿಂಗ್ಸ್ ನಲ್ಲಿ ಭಾರೀ ಮುನ್ನಡೆ ಪಡೆದಿದ್ದ ಕರ್ನಾಟಕ ತಂಡ ಎರಡನೇ ಇನಿಂಗ್ಸ್ ನಲ್ಲಿ 114 ರನ್ ಗಳಿಗೆ ಆಲೌಟಾಯಿತು. ಇದರಿಂದ 213 ರನ್ ಗಳ ಗುರಿ ಪಡೆದಿದ್ದ ಉತ್ತರ ಪ್ರದೇಶ ಸುಲಭ ಗೆಲುವು ದಾಖಲಿಸಿತು.
ಉತ್ತರ ಪ್ರದೇಶ ಪರ ಕರಣ್ ಶರ್ಮ 163 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ ಅಜೇಯ 93 ರನ್ ಗಳಿಸಿದರೆ, ಪ್ರಿಯಂ ಗರ್ಗ್ 60 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 52 ರನ್ ಗಳಿಸಿದರು.
ಒಂದು ಹಂತದಲ್ಲಿ 114 ರನ್ ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಉತ್ತರಪ್ರದೇಶವನ್ನು ಪ್ರಿನ್ಸ್ ಯಾದವ್ (33) ಜೊತೆ ಕರಣ್ ಶರ್ಮ ಮುರಿಯದ 6ನೇ ವಿಕೆಟ್ ಗೆ 99 ರನ್ ಜೊತೆಯಾಟದ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು