Select Your Language

Notifications

webdunia
webdunia
webdunia
webdunia

ಪಿಟಿ ಉಷಾ ಮಗನ ಮದುವೆ ಊಟಕ್ಕೆ ಫಿದಾ ಆದ ಮೇರಿ ಕೋಮ್‌

ಪಿಟಿ ಉಷಾ ಪುತ್ರನ ಮದುವೆ

Sampriya

ಕೊಚ್ಚಿ , ಮಂಗಳವಾರ, 26 ಆಗಸ್ಟ್ 2025 (19:49 IST)
Photo Credit X
ಕೊಚ್ಚಿ: ಖ್ಯಾತ ಕ್ರೀಡಾಪಟು ಹಾಗೂ ರಾಜ್ಯಸಭಾ ಸದಸ್ಯ ಪಿಟಿ ಉಷಾ ಅವರ ಮಗ ಡಾ. ವಿಘ್ನೇಶ್ ಉಜ್ವಲ್ ಹಾಗೂ ಅಶೋಕ್ ಕುಮಾರ್ ಮತ್ತು ಶಿನಿ ದಂಪತಿಯ ಪುತ್ರಿ ಕೃಷ್ಣ ಅವರ ವಿವಾಹ ಸೋಮವಾರ ಅದ್ಧೂರಿಯಾಗಿ ನೆರವೇರಿದೆ.

ಲೇ ಮೆರಿಡಿಯನ್ ಹೋಟೆಲ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕ್ರೀಡೆ, ರಾಜಕೀಯ ಮತ್ತು ಚಲನಚಿತ್ರ ರಂಗದ ಪ್ರಮುಖರು ಉಪಸ್ಥಿತರಿದ್ದರು.

ಸ್ಪೋರ್ಟ್ಸ್ ಮೆಡಿಸಿನ್ ಓದಿರುವ ವಿಘ್ನೇಶ್ ಉಜ್ವಲ್, ಪಿಟಿ ಉಷಾ ಸ್ಥಾಪಿಸಿದ ಸ್ಕೂಲ್ ಆಫ್ ಅಥ್ಲೆಟಿಕ್ಸ್ ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.

ಬಾಕ್ಸಿಂಗ್ ದಿಗ್ಗಜ ಮೇರಿ ಕೋಮ್, ನಟ ಶ್ರೀನಿವಾಸನ್, ಕೇಂದ್ರ ರಾಜ್ಯ ಸಚಿವ ಜಾರ್ಜ್ ಕುರಿಯನ್ ಮತ್ತು ಸಂಸದ ಜಾನ್ ಬ್ರಿಟಾಸ್ ಭಾಗವಹಿಸಿದ್ದರು.

ಗೋಲ್ಡನ್ ಸೀರೆ, ಚಿನ್ನದ ಆಭರಣ ಮತ್ತು ಮಲ್ಲಿಗೆ ಹೂವುಗಳನ್ನು ಧರಿಸಿ ಕೇರಳದ ಸಾಂಪ್ರದಾಯಿಕ ಉಡುಗೆಯಲ್ಲಿ ಮೇರಿ ಕೋಮ್ ಆಗಮಿಸಿದರು. ಕೇರಳದ ಪಾಕಪದ್ಧತಿಯ ಬಗ್ಗೆ ಮಾತನಾಡಿದ ಅವರು, ವಡಾ, ಸಾಂಬಾರ್, ಇಡ್ಲಿಗಳು ಮತ್ತು ಅನ್ನವನ್ನು ನಾನು ಆನಂದಿಸುತ್ತೇನೆ ಎಂದು ಹೇಳಿದರು. ಅನ್ನ ತಿನ್ನುವುದು ಫಿಟ್‌ನೆಸ್‌ಗೆ ಉತ್ತಮವೇ ಎಂಬ ಬಗ್ಗೆ, ""ಅದು ಹೆಚ್ಚು ಅಲ್ಲದಿರುವವರೆಗೆ ಅದು ಉತ್ತಮವಾಗಿದೆ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶುಭಮನ್ ಗಿಲ್ ಆಯ್ಕೆ ಮಾಡ್ತೀರಾ, ತಿರುಗಿಬಿದ್ದ ಸಂಜು ಸ್ಯಾಮ್ಸನ್