Select Your Language

Notifications

webdunia
webdunia
webdunia
webdunia

ಸೆನ್ಸೆಕ್ಸ್: 177 ಪಾಯಿಂಟ್‌ಗಳ ಚೇತರಿಕೆ ಕಂಡ ಶೇರುಸಂವೇದಿ ಸೂಚ್ಯಂಕ

ಸೆನ್ಸೆಕ್ಸ್
ವಾಲ್ ಸ್ಟ್ರೀಟ್ ಮತ್ತು ಏಷ್ಯಾ ಮಾರುಕಟ್ಟೆಗಳ ಭರ್ಜರಿ ವಹಿವಾಟಿನ ಪ್ರಭಾವ ದೇಶಿಯ ಶೇರುಪೇಟೆಯ ಮೇಲೆ ಬೀರಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 177 ಪಾಯಿಂಟ್‌ಗಳ ಚೇತರಿಕೆ ಕಂಡಿದೆ.
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 120.41 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 176.95 ಪಾಯಿಂಟ್‌ಗಳ ಏರಿಕೆ ಕಂಡು 28,079.61 ಅಂಕಗಳಿಗೆ ತಲುಪಿದೆ.  
 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 51.25 ಪಾಯಿಂಟ್‌ಗಳ ಏರಿಕೆ ಕಂಡು  8,658.70 ಅಂಕಗಳಿಗೆ ತಲುಪಿದೆ. 
 
ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಶೇ.0.03 ರಷ್ಟು ಏರಿಕೆ ಕಂಡಿದ್ದರೆ, ಸಿಂಗಾಪೂರ್ ಶೇರುಸೂಚ್ಯಂಕ ಶೇ.0.16 ರಷ್ಟು ಚೇತರಿಕೆಯಾಗಿದೆ. ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.68 ರಷ್ಟು ಏರಿಕೆಯಾಗಿದೆ. ಶಾಂಘೈ ಶೇರುಪೇಟೆ ಸೂಚ್ಯಂಕ ಶೇ.0.04 ರಷ್ಟು ಚೇತರಿಕೆ ಕಂಡಿದೆ.
 
ಅಮೆರಿಕದ ಡೊ ಜೊನ್ಸ್ ಶೇರುಪೇಟೆ ಸೂಚ್ಯಂಕ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.0.58 ರಷ್ಟು ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರಾಕೇಶ್ ನಿಧನ: ಸಿಎಂ ಸಿದ್ದರಾಮಯ್ಯಗೆ ಮುಸ್ಲಿಂ ಧರ್ಮ ಗುರುಗಳ ಸಾಂತ್ವನ