Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತೊಡೆದೇವು ಮಾಡಿ ರುಚಿ ನೋಡಿ

ತೊಡೆದೇವು ಮಾಡಿ ರುಚಿ ನೋಡಿ
ಬೆಂಗಳೂರು , ಸೋಮವಾರ, 3 ಆಗಸ್ಟ್ 2020 (09:30 IST)
ಬೆಂಗಳೂರು : ತೊಡೆದೇವು ಇದೊಂದು ಮಲೆನಾಡಿನ ವಿಶಿಷ್ಟವಾದ ಆರೋಗ್ಯಕರವಾದ ಸಿಹಿತಿಂಡಿ.  ಇದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು : ಅಕ್ಕಿ, ಅರಿಶಿನ, ಬೆಲ್ಲ, ಶೇಂಗಾ ಎಣ್ಣೆ, ತೊಡದೇವು ಎರೆಯುವ ಮಡಿಕೆ, ಅಡಿಕೆ ಹಾಳೆಯ ತುಂಡು.
ಮಾಡುವ ವಿಧಾನ : ರಾತ್ರಿ ನೆನೆಸಿಟ್ಟ ಅಕ್ಕಿಯನ್ನು ಬೆಳಿಗ್ಗೆ  ಮಿಕ್ಸಿಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಅದಕ್ಕೆ ಮುಕ್ಕಾಲು ಭಾಗದಷ್ಟು ಅಕ್ಕಿ ಹಿಟ್ಟು , ಸ್ವಲ್ಪ ಅರಿಶಿನ ಹಾಕಿ ದೋಸೆ ಹಿಟ್ಟಿನಂತೆ ಕಲಸಿಕೊಳ್ಳಿ. ಬಳಿಕ ಸೌದೆ ಒಲೆಯ ಮೇಲೆ ತೊಡೆದೇವು ತಯಾರಿಸಲು ಬೇಆದ ಅಗಲ ತಳದ ಮಣ್ಣಿನ ಗಡಿಗೆಯನ್ನು ತಲೆಕೆಳಗಾಗಿ ಇಡಬೇಕು. ಮಡಿಕೆಯ ಮೇಲೆ ಶೇಂಗಾ ಎಣ್ಣೆಯಿಂದ ಸವರಬೇಕು.

ನಂತರ ಆಯತಾಕಾರದ ಶುದ್ಧವಾದ ಬಟ್ಟೆಯ ಒಂದು ಅಂಚನ್ನು ಚಿಕ್ಕ ಮರದ ಕೋಲೊಂದಕ್ಕೆ ಸುತ್ತಿ ಬಿಗಿಗೊಳಿಸಬೇಕು. ಈಗ ಈ ಬಟ್ಟೆಯನ್ನು ತಯಾರಿಸಿಕೊಂಡ ಹಿಟ್ಟಿನಲ್ಲಿ ಅದ್ದಿ ಹದವಾಗಿ ಕಾದ ಗಡಿಗೆಯ ಮೇಲೆ ಪ್ಲಸ್ ಆಕಾರದಲ್ಲಿ ಎಳೆಯಬೇಕು . ಅನಂತರ ಗರಿಗರಿಯಾದ ತೊಡೆದೇವನ್ನು ನಿಧಾನವಾಗಿ ದೋಸೆಯಂತೆ ಒಣಗಿದ ಅಡಿಕೆ ಹಾಳೆಯನ್ನು ಪುಟ್ಟದ್ದಾಗಿ ಕತ್ತರಿಸಿಕೊಂಡು ಅದರಲ್ಲಿ ತೆಗೆಯಬೇಕು. ಅನಂತರ ತ್ರಿಕೋನಾಕಾರದಲ್ಲಿ ಮಡಿಚಿಟ್ಟು, ತುಪ್ಪ ಹಾಕಿ ಸವಿಯಬಹುದು.

 

 

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕರವಾದ ಮೆಂತ್ಯಸೊಪ್ಪಿನ ಕಡುಬು