ಬೆಂಗಳೂರು: ಬಡವರ ಬಾದಾಮಿ ಎಂದೇ ಪ್ರಸಿದ್ಧವಾಗಿರುವ ಶೇಂಗಾ (ಕಡಲೇಬೀಜ) ಸಾಕಷ್ಟು ಪೌಷ್ಠಿಕಾಂಶವನ್ನು ಹೊಂದಿದೆ. ಮಕ್ಕಳಿಗೆ ಸಂಜೆ ವೇಳೆ ತಿನ್ನಲು ಇದರ ಚಿಕ್ಕಿ (ಬರ್ಫಿ) ಒಂದೊಳ್ಳೆ ತಿನಿಸಿ. ಸುಲಭವಾಗಿ ತಯಾರಾಗುವ ಈ ತಿನಿಸು ಆರೋಗ್ಯಕ್ಕೂ ಒಳ್ಳೆಯದು.
ಮಾಡುವ ವಿಧಾನ: ಕಡಲೆಬೀಜವನ್ನು ಹದವಾಗಿ ಹುರಿದುಕೊಂಡು, ಅದರ ಸಿಪ್ಪೆಯನ್ನು ತೆಗೆಯಿರಿ, ನಂತರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಒಲೆಯ ಮೇಲೆ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಎಳೆ ಪಾಕ ಮಾಡಿಕೊಳ್ಳಿ. ಅದಕ್ಕೆ ಕಡಲೇ ಬೀಜದ ಪುಡಿ, ತುಪ್ಪ, ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ. ಹದ ಬಿಸಿ ಇರುವಾಗಲೇ ಚಾಕುವಿಗೆ ತುಪ್ಪ ಸವರಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ