ಬೆಂಗಳೂರು: ಬೆಳಿಗ್ಗೆ ಯಾವ ತಿಂಡಿ ಮಾಡುವುದು ಎಂಬ ಚಿಂತೆ ಎಲ್ಲರಿಗೂ ಇದ್ದೆ ಇರುತ್ತದೆ. ಅದರಲ್ಲೂ ತಿಂಡಿಯನ್ನು ಬೇಗ ರೆಡಿ ಮಾಡಬೇಕು ಎಂಬ ಆತುರವು ಇರುತ್ತದೆ. ಈ ಈರುಳ್ಳಿ ರವಾ ದೋಸೆ ರುಚಿಯಾಗಿದ್ದು ಬೇಗನೆ ರೆಡಿಯಾಗುತ್ತದೆ.
ಬೇಕಾಗುವ ಸಾಮಾಗ್ರಿಗಳು:
½ ಕಪ್ ರವಾ, ½ ಕಪ್ ಅಕ್ಕಿ ಹಿಟ್ಟು, ¼ ಕಪ್ ಮೈದಾ ಹಿಟ್ಟು, ½ ಕಪ್ ಮೊಸರು, 1 ಸಣ್ಣಗೆ ಹೆಚ್ಚಿದ ಈರುಳ್ಳಿ, ½ ಇಂಚು ಸಣ್ಣಗೆ ಹೆಚ್ಚಿದ ಶುಂಠಿ, 1-2 ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, (ಬೇಕಾದಲ್ಲಿ ಮಾತ್ರ), 2 ಚಮಚ ಕೊತ್ತಂಬರಿ ಸೊಪ್ಪು, ¼ ಚಮಚ ಕಾಳುಮೆಣಸಿನ ಪುಡಿ, ½ ಚಮಚ ಜೀರಿಗೆ ಪುಡಿ, ಉಪ್ಪು, ತುಪ್ಪ ಅಥವಾ ಎಣ್ಣೆ.
ಮಾಡುವ ವಿಧಾನ:
ಮೊದಲು ಪಾತ್ರೆಯಲ್ಲಿ ರವಾ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಮೊಸರು ಹಾಕಿ ಮತ್ತೆ ಮಿಕ್ಸ್ ಮಾಡಿ. ಆಮೇಲೆ ನೀರುದೋಸೆಯ ಹದಕ್ಕೆ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ ಹಾಗು ಈರುಳ್ಳಿ ಹಾಕಿ ಮಿಕ್ಸ್ ಮಾಡಿ. ನಂತರ ಇದನ್ನು 20 ರಿಂದ 30 ನಿಮಿಷ ನೆನೆಯಲು ಬಿಡಿ. ನಂತರ ಒಂದು ವೇಳೆ ಹಿಟ್ಟು ದಪ್ಪವಾಗಿದ್ದರೆ ಸ್ವಲ್ಪ ನೀರು ಹಾಕಿಕೊಳ್ಳಬಹುದು. ಆಮೇಲೆ ಕಾದ ತವದ ಮೇಲೆ ಎಣ್ಣೆ/ ತುಪ್ಪ ಸವರಿ ನೀರುದೋಸೆಯಂತೆ ಹೂಯ್ಯಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ