ಬೆಂಗಳೂರು: ಬಾಳೆಕಾಯಿ ಪಲ್ಯ ಚಪಾತಿ ಜತೆಗೆ ಬೆಸ್ಟ್ ಕಾಂಬಿನೇಷನ್. ಅದೇ ರೀತಿ ಚಪಾತಿ ಜತೆ ತಿನ್ನಲು ಇನ್ನೊಂದು ರೀತಿಯ ಬಾಳೆಕಾಯಿ ಕೂಟು ಹೇಳುತ್ತೇವೆ. ನೋಡಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ಬಾಳೆಕಾಯಿ
ಕಾಯಿ ತುರಿ
ಬೆಲ್ಲ
ಜೀರಿಗೆ
ಹುಳಿ
ಉಪ್ಪು
ಅರಸಿನ ಪುಡಿ
ಖಾರದ ಪುಡಿ
ಮಾಡುವ ವಿಧಾನ
ಬಾಳೆಕಾಯಿಯನ್ನು ಹೆಚ್ಚಿಕೊಂಡು ನೀರಲ್ಲಿ ನೆನೆ ಹಾಕಿ. ನಂತರ ಇದಕ್ಕೆ ಸ್ವಲ್ಪವೇ ಖಾರದ ಪುಡಿ ಅಥವಾ ಹಸಿಮೆಣಸು, ಅರಸಿನ ಪುಡಿ, ಹುಣಸೆ ಹುಳಿ, ಬೆಲ್ಲ, ಉಪ್ಪು ಹಾಕಿಕೊಂಡು ಬೇಯಿಸಿ. ಕಾಯಿತುರಿಗೆ ಸ್ವಲ್ಪ ಜೀರಿಗೆ ಹಾಕಿಕೊಂಡು ನುಣ್ಣಗೆ ರುಬ್ಬಿ. ಬೆಂದ ಹೋಳಿಗೆ ರುಬ್ಬಿದ ಕಾಯಿ ಸೇರಿಸಿ ಕುದಿಸಿದರೆ ಬಾಳೆ ಕಾಯಿ ಸಿಹಿ ಕೂಟು ಸವಿಯಲು ಸಿದ್ಧ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ