ಬೆಂಗಳೂರು: ಬಿಪಿ ಏರಿದರೆ ಸಿಟ್ಟೂ ಜತೆಯಾಗಿ ಬರುತ್ತದೆ. ಮಹಿಳೆಯರು ಒತ್ತಡಕ್ಕೊಳಗಾದಾಗ ಇನ್ನು ಮುಂದೆ ಕೈಗೆ ಸಿಕ್ಕ ಪಾತ್ರೆ ಕುಕ್ಕುವುದು ಬೇಡ. ಫುಟ್ ಬಾಲ್ ನ್ನು ಜಾಡಿಸಿ ಒದ್ದರೆ ಸಾಕು!
ಹೀಗೊಂದು ವಿನೂತನ ಅಂಶವೊಂದು ಬೆಳಕಿಗೆ ಬಂದಿದೆ. ಮಹಿಳೆಯರಲ್ಲಿ ಅತೀ ಒತ್ತಡ ಕಡಿಮೆ ಮಾಡಲು ಫುಟ್ ಬಾಲ್ ಆಡಿದರೆ ಸಾಕಂತೆ. ವಾರಕ್ಕೆ ಎರಡು ಅಥವಾ ಮೂರು ಬಾರಿ ಫುಟ್ ಬಾಲ್ ಆಡುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಶಾಂತವಾಗಿರುತ್ತೀರಿ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಡೆನ್ಮಾರ್ಕ್ ನ ವಿವಿಯೊಂದು ನಡೆಸಿದ ಸಂಶೋಧನೆಯಲ್ಲಿ ಇಂತಹದ್ದೊಂದು ಅಂಶ ಬೆಳಕಿಗೆ ಬಂದಿದೆ. “ನಮ್ಮ ಅಧ್ಯಯನದ ಪ್ರಕಾರ ಮಹಿಳೆಯರು ಫುಟ್ ಬಾಲ್ ಆಡುವುದರಿಂದ, ಫಿಟ್ ಆಗಿರುವುದರಿಂದ ಮಹಿಳೆಯರು ರಕ್ತದೊತ್ತಡ, ದೇಹ ತೂಕ, ಎಲುಬಿನ ಸದೃಢತೆ ಕಾಪಾಡಿಕೊಳ್ಳಬಹುದು ಎಂದು ತಿಳಿದು ಬಂದಿದೆ” ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.
35- 50 ವರ್ಷದೊಳಗಿನ ಮಹಿಳೆಯರ ಮೇಲೆ ಪ್ರಯೋಗ ನಡೆಸಿ ಅವರು ಈ ಸತ್ಯ ಕಂಡುಕೊಂಡಿದ್ದಾರೆ. ಆದರೆ ಈಗಾಗಲೇ ಪತ್ನಿಯ ಕೋಪಕ್ಕೆ ಗುರಿಯಾಗಿ ದಿನ ನಿತ್ಯ ಜಾಡಿಸಿಕೊಳ್ಳುವವರು ಮಾತ್ರ ಇದಕ್ಕೆ ಅಧ್ಯಯನ ಬೇಕೇ? ನಮ್ಮನ್ನು ಕೇಳಿದ್ರೆ ಆಗ್ತಿತ್ತು ಎನ್ನುತ್ತಿದ್ದಾರಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ