ಬೆಂಗಳೂರು: ಚಾಟ್ಸ್ ಐಟಂ ತಿನ್ನುವ ಆಸೆ. ಆದರೆ ಬೀದಿ ಬದಿಯಲ್ಲಿ ತಿನ್ನಲು ಆರೋಗ್ಯದ ಸಮಸ್ಯೆ ಬರುತ್ತದೆ ಎಂದರೆ ಮನೆಯಲ್ಲೇ ಮಾಡಿ ತಿನ್ನಬಹುದು. ಸರಳವಾಗಿ ಪಾನಿ ಪುರಿ ಮಾಡುವ ವಿಧಾನ ಹೇಳಿದ್ದೇವೆ ನೋಡಿ.
ಬೇಕಾಗುವ ಸಾಮಗ್ರಿಗಳು
ಪಾನಿ ಮಾಡಿಕೊಳ್ಳಲು:
ಜೀರಿಗೆ
ಧನಿಯಾ
ಕಾಳು ಮೆಣಸು
ಹುಣಸೆ ಹುಳಿ
ಬೆಲ್ಲ
ಶುಂಠಿ
ಓಮದ ಕಾಳು
ಚ್ಯಾಟ್ ಮಸಾಲ
ಹಸಿಮೆಣಸು
ಪುದೀನಾ ಸೊಪ್ಪು
ಉಪ್ಪು
ಪಾನಿಗೆ ಹಾಕಿಕೊಳ್ಳುವ ಸಾಮಗ್ರಿ:
ಈರುಳ್ಳಿ
ಪೂರಿ
ಕೊತ್ತಂಬರಿ ಸೊಪ್ಪು
ಬೇಯಿಸಿದ ಬಟಾಣಿ ಕಾಳು
ಮಾಡುವ ವಿಧಾನ
ಮಸಾಲೆಗಳನ್ನು ಹೊರತುಪಡಿಸಿ ಪಾನಿಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಚಾಟ್ ಮಸಾಲ, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ. ಪೂರಿಯನ್ನು ಚಿಕ್ಕದಾಗಿ ತೂತು ಮಾಡಿ ಅದರೊಳಗೆ ಕೊತ್ತಂಬರಿ ಸೊಪ್ಪು, ಬೇಯಿಸಿದ ಬಟಾಣಿ ಕಾಳು, ಈರುಳ್ಳಿ, ಕೊತ್ತಂಬರಿ ಸೊಪ್ಪು ಬೇಕಾದಲ್ಲಿ ಸೇರಿಸಿಕೊಳ್ಳಿ. ಇದಕ್ಕೆ ಮೊದಲೇ ತಯಾರಿಸಿದ ಪಾನಿ ಸೇರಿಸಿಕೊಂಡು ತಿಂದರೆ ಪಾನಿ ಪೂರಿ ಮನೆಯಲ್ಲೇ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ