ಬೆಂಗಳೂರು: ತೊಂಡೆಕಾಯಿಯನ್ನು ಸಾಧಾರಣವಾಗಿ ಹಸಿ ತಿನ್ನುವುದಿಲ್ಲ. ಇದನ್ನು ಚಿಕ್ಕಮಕ್ಕಳು ಹಸಿಯಾಗಿ ಸೇವಿಸಿದರೆ ನಾಲಗೆ ಹೊರಳದು ಎಂದೆಲ್ಲಾ ನಂಬಿಕೆಯಿದೆ. ಆದರೆ ಎಳೆ ಮಿಡಿ ತೊಂಡೆಕಾಯಿಯನ್ನು ಉಪ್ಪಿನಕಾಯಿ ಮಾಡಬಹುದು. ಅದು ಹೇಗೆ ಅಂತೀರಾ? ಕೆಳಗೆ ನೋಡಿ.
ಬೇಕಾಗುವ ಸಾಮಗ್ರಿಗಳು
ಎಳೆ ತೊಂಡೆಕಾಯಿ
ಖಾರದ ಪುಡಿ
ಅರಸಿನ ಪುಡಿ
ಸಾಸಿವೆ
ಉಪ್ಪು
ಇಂಗು
ಮಾಡುವ ವಿಧಾನ
ಎಳೆ ತೊಂಡೆಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಒಂದು ಗಂಟೆ ಬಿಡಿ. ಉಪ್ಪು ಕರಗಿದ ಮೇಲೆ ಒಂದು ಮಿಕ್ಸಿಯಲ್ಲಿ ಸಾಸಿವೆ ಹುಡಿ ಮಾಡಿಕೊಳ್ಳಿ. ಸಾಸಿವೆ ಪುಡಿಯ ಎರಡು ಪಾಲಿನಷ್ಟು ಖಾರದ ಪುಡಿ, ಕಾಲು ಭಾಗದಷ್ಟು ಅರಸಿನ ಪುಡಿ, ಇಂಗು ಸೇರಿಸಿ ಹೆಚ್ಚಿದ ತೊಂಡೆಕಾಯಿಗೆ ಬೆರೆಸಿ. ಎಳೆ ತೊಂಡೆಕಾಯಿಯ ಉಪ್ಪಿನ ಕಾಯಿ ಸಿದ್ಧ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ